ರಾಜ್ಯ ಬಿಜೆಪಿಗೆ ಸಿದ್ದರಾಮಯ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಹೀಗಾಗಿ ಬಿಜೆಪಿಯಿಂದ ಟಾರ್ಗೆಟ್ ಸಿದ್ದರಾಮಯ್ಯ ಎನ್ನುವ ಅಭಿಯಾನ ಶುರುವಾಗಿದೆ.
ಸಿದ್ದರಾಮಯ್ಯ ಅವಧಿಯ ಲೋಪಗಳನ್ನು ಪಟ್ಟಿ ಮಾಡುತ್ತಿರುವ ಬಿಜೆಪಿ, ಪ್ರತಿ ಸಭೆ, ಸಮಾರಂಭಗಳಲ್ಲಿ ದಾಖಲೆ ಸಹಿತ ಆರೋಪ ಮಾಡುತ್ತಿದೆ. ಸಿಎಂ ಸೇರಿದಂತೆ ಸಚಿವರಿಂದಲೂ ಅಭಿಯಾನ ಮುಂದುವರೆದಿದೆ. ಇನ್ನು ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯ ಆರೋಪಕ್ಕೆ ಉತ್ತರ ಕೊಡಲು ಸೂಚನೆ ನೀಡಲಾಗಿದೆ.