ಮಳೆ ಹೆಸರಲ್ಲೇ ನಡೀತಿದೆ ರಣರಣ ರಾಜಕಾರಣ.. ಹೇಗಿದೆ ಗೊತ್ತಾ ಘಟಾನುಘಟಿಗಳ ರಣಾರ್ಭಟ..?

ಮಳೆ ಹೆಸರಲ್ಲೇ ನಡೀತಿದೆ ರಣರಣ ರಾಜಕಾರಣ.. ಹೇಗಿದೆ ಗೊತ್ತಾ ಘಟಾನುಘಟಿಗಳ ರಣಾರ್ಭಟ..?

Published : Jul 22, 2024, 05:30 PM IST


ಬಿಟ್ಟೂಬಿಡದ ಮಳೆಯಲ್ಲಿ ನಾಯಕರ ರಾಜಕೀಯ ಜ್ವಾಲಾಗ್ನಿ!
ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಭಾವಿ ನಾಯಕರ ಭೇಟಿ..!
ರಾಜಕೀಯ ರಣೋತ್ಸಾಹ ಹೆಚ್ಚಿಸಿದ ಮಳೆಯಲ್ಲಿ ವಾಕ್ಸಮರ!

ರಾಜ್ಯದ ಜನ ಯಾವ ಮಳೆಗಾಗಿ ಕಾಯ್ತಾ ಇದ್ರೋ ಅಂಥಾ ಮಳೆ(Rain), ಅತಿ ಭೀಕರ ವಾತಾವರಣವನ್ನೇ ಸೃಷ್ಟಿಸಿದೆ. ಅದರಲ್ಲೂ ಕರಾವಳಿ ಭಾಗದಲ್ಲಂತೂ ಮಳೆ ಅಟ್ಟಹಾಸ ಮಿತಿ ಮೀರಿದೆ. ಈ ರಣಮಳೆಗೆ ಅದೆಷ್ಟು ಮನೆಗಳು ನೆಲ ಕಚ್ಚಿವೆಯೋ.. ಅದೆಷ್ಟು ಜನರ ಬದುಕು ಅಕ್ಷರಶಃ ಅತಂತ್ರವಾಗಿದೆಯೋ ಲೆಕ್ಕವೇ ಇಲ್ಲ. ಇಷ್ಟೂ ಕಾಲ ಸದನದಲ್ಲಿ(Assembly session) ಕದನವನ್ನೇ ನಾವೆಲ್ಲರು ನೋಡಿದ್ವಿ. ಬಿಜೆಪಿ(BJP) ಹಾಗೂ ಜೆಡಿಎಸ್(JDS) ನಾಯಕರು ಒಟ್ಟಾಗಿ ಕಾಂಗ್ರೆಸ್ (Congress)ಮೇಲೆ ಎರಗಿದ್ದರು. ಪ್ರತಿದಿನವೂ   ರಾಜ್ಯವನ್ನೇ ಕಂಗೆಡಿಸಿದ ಹಗರಣಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆಯಾಯ್ತು. ಆ ವೇಳೆ ರಣಾಂಗಣವಾಗಿತ್ತು ವಿಧಾನಸಭಾ ಸದನ. ಆದ್ರೆ ಈಗ, ಆಡಳಿತಾರೂಢ ಪಕ್ಷ ಹಾಗೂ ವಿರೋಧ ಪಕ್ಷಗಳ ಕಾದಾಟಕ್ಕೆ ವೇದಿಕೆ ಶಿಫ್ಟ್ ಆಗಿದೆ. ರಣಮಳೆಯ ರಣಾಂಗಣದಲ್ಲಿ ವಾಗ್ಯುದ್ಧ ಶುರುವಾಗಿದೆ.ಪ್ರವಾಹದಂಥಾ ಪರಿಸ್ಥಿತಿ ಬಂದಾಗ, ಆಪತ್ತಿನಲ್ಲಿರೋ ಜನಕ್ಕೆ ಸಹಾಯ ಮಾಡೋದು.. ಅಲ್ಲಿನ ಸ್ಥಿತಿಗತಿ ಹೇಗಿದೆ ಅಂತ ವಿಚಾರಿಸಿಕೊಳ್ಳೋದು.. ಸಮಸ್ಯೆಗಳಿಗೆಲ್ಲಾ ಸೂಕ್ತ ಪರಿಹಾರ ಕಂಡುಕೊಳ್ಳೋದು ರಾಜಕೀಯ ನಾಯಕರ ಅತಿ ಮುಖ್ಯ ಕರ್ತವ್ಯ.. ಅದು ಸಹಜವೂ ಹೌದು.. ಆದ್ರೆ, ಈ ಬಾರಿ ಮಾತ್ರ, ಈ ಪ್ರವಾಹ ಪ್ರದೇಶಗಳ ಭೇಟಿ ವಿಚಾರದಲ್ಲೂ ಕೂಡ ರಾಜಕಾರಣ ಜೋರಾಗೇ ನಡೀತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ+ಜೆಡಿಎಸ್ ನಡುವೆ ಯುದ್ಧವೇ ಆರಂಭವಾಗಿದೆ.

ಇದನ್ನೂ ವೀಕ್ಷಿಸಿ:  ಮಕ್ಕಳು ಸೆರೆವಾಸಕ್ಕೆ.. ಹೆತ್ತವರು ಮಸಣಕ್ಕೆ.. ಹೆತ್ತವರನ್ನೇ ಕೊಂದ ಅಂಧಾಭಿಮಾನ..!

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more