PSI Recruitment Scam: 210 ಕೋಟಿ ಅಕ್ರಮ, ರಾಜ್ಯ ಸರ್ಕಾರ ಭಾಗಿ: ಪ್ರಿಯಾಂಕ್ ಖರ್ಗೆ ಆರೋಪ

Apr 18, 2022, 1:28 PM IST

ಬೆಂಗಳೂರು (ಏ. 18): ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ 210 ಕೋಟಿ ರು.ಗಳಷ್ಟುಬಹುದೊಡ್ಡ ಹಗರಣವಾಗಿದ್ದು, ರಾಜ್ಯ ಸರ್ಕಾರ ಈ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. "ಸರಿಯಾಗಿ ತನಿಖೆ ಮಾಡಿದರೆ 3-4 ವಿಕೇಟ್ ಉರುಳಲಿದೆ. 545ರಲ್ಲಿ 300 ಮಂದಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆ, ಪ್ರತಿ ಅಭ್ಯರ್ಥಿಯಿಂದ 70 ರಿಂದ 80 ಲಕ್ಷ ಪಡೆದಿದ್ದಾರೆ" ಎಂದು ಪ್ರಿಯಾಂಕ್ ಖರ್ಗೆ‌ ಆರೋಪಿಸಿದ್ದಾರೆ. 

ಇದನ್ನೂ ಓದಿ: PSI Recruitment Scam: ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಸ್ಕೇಪ್, ಪತಿ ಸಿಐಡಿ ಖೆಡ್ಡಾಗೆ!

ಇನ್ನು ಭಾನುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ "ಪಾರದರ್ಶಕ ತನಿಖೆ ನಡೆಯಬೇಕಾದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು  ಕಾಂಗ್ರೆಸ್‌ ಶಾಸಕ ಆಗ್ರಹಿಸಿದ್ದಾರೆ. ಕೆಲಸ ಕೊಡಿಸಲು ಹಲವು ಅಭ್ಯರ್ಥಿಗಳಿಂದ ತಲಾ 60ರಿಂದ 70 ಲಕ್ಷ ರು. ವರೆಗೆ ಹಣ ವಸೂಲಿಯ ಅಕ್ರಮ ನಡೆದಿದೆ. ಸರ್ಕಾರ ಈ ಪ್ರಕರಣವನ್ನು ತನಿಖೆಗೆ ವಹಿಸಿರುವುದರಿಂದ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ"  ಎಂದಿದ್ದಾರೆ