ರಾಯಚೂರಿನ ಸಿಂಧನೂರಿನಲ್ಲಿ ಹಸಿದವರ ಹೊಟ್ಟೆ ತುಂಬಿಸೋ ಕಾಯಕದಲ್ಲಿ ವ್ಯಕ್ತಿಯೊಬ್ಬರು ನಿರತರಾಗಿದ್ದಾರೆ. ಹಾಗೂ ಮುದ್ದೇಬಿಹಾಳದಲ್ಲಿ ಮಹಿಳೆ ಬಸ್'ನಲ್ಲಿ ಬಿಟ್ಟಿದ್ದ 3 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣದ ತುಂಬಿದ್ದ ಬ್ಯಾಗ್ ಹಿಂದಿರುಗಿಸಿ ಸಾರಿಗೆ ಸಿಬ್ಬಂದಿ ಮಾನವೀಯ ಮೆರೆದಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಶೋಕ ನಲ್ಲ ಎಂಬುವವರು ಅನ್ನದಾಸೋಹಕ್ಕೆ ಕೈ ಹಾಕಿದ್ದಾರೆ. ಅಕ್ಷಯ ಆಹಾರ ಜೋಳಿಗೆ ಮಾಡಿಕೊಂಡು ಫೋನ್ ಮಾಡಿದ್ರೆ ಸಾಕು ಅನ್ನ ಉಳಿದ ಸ್ಥಳಕ್ಕೆ ತಮ್ಮ ವಾಹನ ತೆಗೆದುಕೊಂಡು ಹೋಗ್ತಾರೆ. ಕಲ್ಯಾಣ ಮಂಟಪ, ಸಭೆ ಮತ್ತು ಸಮಾರಂಭದಲ್ಲಿ ಉಳಿದ ಆಹಾರವನ್ನು ತೆಗೆದುಕೊಂಡು ಬಡವರು ವಾಸವಾಗಿದ್ದ ಬಡಾವಣೆಗಳಿಗೆ ತೆರಳಿ ಬಡವರಿಗೆ ಅನ್ನ ಹಂಚುತ್ತಾರೆ. ಈ ಸೇವಾ ಕಾಯಕವನ್ನ ಕಳೆದ 8 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇವರ ಜೊತೆ ಖಾಜಾ ಹುಸೇನ್ ದಂಪತಿ ಸಹ ಕೈಜೋಡಿಸಿದ್ದಾರೆ. ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸಾರಿಗೆ ವಿಭಾಗದಲ್ಲಿ ಡ್ರೈವರ್ ಕಂ ಕಂಡೆಕ್ಟರ್ ಆಗಿ ಚೆನ್ನಬಸಪ್ಪ ಪತ್ತೇಪೂರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಸ್'ನಲ್ಲಿ ಮಹಿಳೆಯೊಬ್ಬರು ತಮ್ಮ 3 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಮರೆತು ಹೋಗಿದ್ದರು. ಅದನ್ನು ಹಿಂದಿರುಗಿಸುವ ಮೂಲಕ ಚೆನ್ನಬಸಪ್ಪ ಪತ್ತೇಪೂರ ಎಲ್ಲರ ಮನ ಗೆದ್ದಿದ್ದಾರೆ.