ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ

ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ

Published : Jan 24, 2023, 04:26 PM IST

ಗದಗ ನಗರದ ಕತ್ತಲೆ ಮಾರ್ಕೆಟ್ ಸುದ್ದಿಯನ್ನು ಬಿಗ್ 3 ಪ್ರಸಾರ ಮಾಡಿತ್ತು. ಅದು ಇಂಪ್ಯಾಕ್ಟ್ ಆಗಿದೆ. ಇಲ್ಲಿದೆ ಡಿಟೇಲ್ಸ್.

ಗದಗ ನಗರದ ಹೃದಯ ಭಾಗದಲ್ಲಿನ ತರಕಾರಿ ಮಾರ್ಕೆಟ್'ನಲ್ಲಿ, 40ಕ್ಕೂ ಹೆಚ್ಚು ತರಕಾರಿ ಮಳಿಗೆಗಳ ವ್ಯಾಪಾರಸ್ಥರು ದೀಪದ ಬೆಳಕಲ್ಲೇ ವ್ಯಾಪಾರ ಮಾಡ್ತಿದ್ರು. ಸಂಬಂಧಿಸಿದವರು ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಬಗ್ಗೆ ಬಿಗ್-3ಯಲ್ಲಿ ವರದಿ ಪ್ರಸಾರ ಮಾಡಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಸ್ಥಳಕ್ಕೆ ಭೇಟಿ ನೀಡಿದ್ರು. ವ್ಯಾಪಾರಸ್ಥರಿಂದ ಮಾಹಿತಿ ಪಡೆದರು. ನಂತರ ಅಧಿಕಾರಿಗಳಿಗೆ ಫೋನ್ ಮಾಡಿ ಕೂಡಲೇ ತಾತ್ಕಾಲಿಕವಾಗಿ ಲೈಟ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ರು. ಲೈಟ್ ಅಳವಡಿಕೆ ಕಾರ್ಯ ಪಟಾಫಟ್ ಅಂತ ಶುರವಾಯ್ತು. ಮಧ್ಯಾಹ್ನದ ವೇಳೆಗೆ ವೈರಿಂಗ್ ಕೆಲಸ ಶುರು ಮಾಡಿದ್ರು.  7 ತಿಂಗಳಿನಿಂದ ದೀಪದ ಬೆಳಕಲ್ಲೇ ವ್ಯಾಪಾರ ಮಾಡ್ತಿದ್ದ ವ್ಯಾಪಾರಸ್ಥರು ಒಂದೇ ದಿನದಲ್ಲಿ ಲೈಟ್ ಬಂದಿದ್ದನ್ನ ಕಂಡು ದಂಗಾಗಿದ್ರು. ಅವರು ಬಿಗ್-3 ಕಾರ್ಯಕ್ಕೆ ಧನ್ಯವಾದ ಕೂಡ ತಿಳಿಸಿದ್ರು.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more