Big 3: ಅವ್ಯವಸ್ಥೆಯ ಆಗರವಾದ 'ಚಾರ್ಮಾಡಿ ಘಾಟ್‌' ಚೆಕ್ ಪೋಸ್ಟ್

Dec 26, 2022, 2:56 PM IST

ಚಾರ್ಮಾಡಿ ಘಾಟ್  ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಕಳ್ಳ-ಕಾಕರಿಗೆ ಫೇವರೆಟ್ ಜಾಗ. ಕೊಲೆ ಮಾಡಿ ಹೆಣ ಬಿಸಾಕೋಕೆ ಈ ಜಾಗ ಹೇಳಿ ಮಾಡಿಸಿದಂತಿದೆ. ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಮಧ್ಯೆ ಸಾವಿರಾರು ಅಡಿಯ ಕಂದಕವಿರೋದು ಕೊಲೆಗಡುಕರಿಗೆ ವರದಾನ. ಕೊಟ್ಟಿಗೆಹಾರದ ಬಳಿ ಇಂತಹ ಕಳ್ಳರನ್ನು ಪತ್ತೆ ಹಚ್ಚಲು ನಿರ್ಮಾಣ ಮಾಡಿರುವ ಚೆಕ್ ಪೋಸ್ಟ್ ಸಿಬ್ಬಂದಿಗೆ  ಸಂಕಟ, ಭಯ, ತಲೆನೋವು ಉಂಟು ಮಾಡಿದೆ. ದಿನದ 24  ಗಂಟೆಯೂ ಇಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಈ ಚೆಕ್ ಪೋಸ್ಟ್ ನಲ್ಲಿ ರೆಸ್ಟ್ ಕೂಡ ಮಾಡುತ್ತಾರೆ. ಮಳೆ ಬಂದ್ರೆ ಈ ಕೊಠಡಿಯ ಒಳಗೆ ನೀರು ಬರುತ್ತದೆ. ಅಲ್ಲದೆ ಕೊಠಡಿಯೂ ಬಿರುಕು ಬಿಟ್ಟಿದ್ದು, ಯಾವಾಗ ತಲೆ ಮೇಲೆ ಬಿಳುತ್ತೆ ಎನ್ನುವ ಆತಂಕ ಇದೆ. ಇನ್ನೊಂದಡೆ ಇದರಲ್ಲೇ ಕರ್ತವ್ಯ ನಿರ್ವಹಿಸಲೇ ಬೇಕಾದಂತಹ ಪರಿಸ್ಥಿತಿ ಇಲ್ಲಿನ ಸಿಬ್ಬಂದಿಗೆ ಇದೆ.  ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಬಂಡೆ, ಮಣ್ಣು ಕುಸಿತ ಉಂಟಾದ್ರೆ  ಟ್ರಾಫಿಕ್ ಸಮಸ್ಯೆಯ ವೇಳೆಯಲ್ಲಿ ಪ್ರಯಾಣಿಕರು ಇಲ್ಲಿಯೇ ಆಶ್ರಯವನ್ನು ಪಡೆದ ತಾಣವೂ ಕೂಡ ಇದು. ಇಂತಹ ಚೆಕ್ ಪೋಸ್ಟ್ ಅವ್ಯವಸ್ಥೆ ಆಗರವಾಗಿದ್ದು, ಜೊತೆಗೆ ಸಿಬ್ಬಂದಿಗೆ ನೀಡಿರುವ ವಾಕಿಟಾಕಿಯೂ ಮೂಲೆಗೆ ಸೇರಿದೆ.

10 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿದ ಸಿಎಂ