BIG 3: ಸೇತುವೆ ಕುಸಿದು 6 ತಿಂಗಳಾದ್ರೂ ಡೋಂಟ್ ಕೇರ್: ಕೊಡಗು ಜನರ ಸಮಸ್ಯೆ ಕೇಳುವವರು ಯಾರು?

Dec 21, 2022, 2:46 PM IST

ಯಡವನಾಡು ಕುಶಾಲನಗರ ತಾಲ್ಲೂಕು ಕೇಂದ್ರದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಕುಸಿದು ಬಿದ್ದು 6 ತಿಂಗಳಾದರೂ ಸೇತುವೆ ನಿರ್ಮಿಸಿಲ್ಲ.  ಯಡವನಾಡು ಗ್ರಾಮದಲ್ಲಿ 75 ಕ್ಕೂ ಹೆಚ್ಚು ಕುಟುಂಬಗಳಿದ್ದು 50ಕ್ಕೂ ಹೆಚ್ಚು ಮಕ್ಕಳು ಶಾಲಾ, ಕಾಲೇಜಿಗೆ ಕುಶಾಲನಗರ, ಸೋಮವಾರಪೇಟೆ ಹೋಗುತ್ತಾರೆ. ಇವರೆಲ್ರೂ ಕುಸಿದು ಹೋಗಿರುವ ಈ ಸೇತುವೆಯ ಹಳ್ಳ ಇಳಿದು ನೀರು ದಾಟಿ ಹೋಗಬೇಕು. ಅದಕ್ಕಾಗಿ ಹಳೆಯ ವಿದ್ಯುತ್ ಕಂಬಗಳು ಮತ್ತು ಮರದ ದಿಮ್ಮಿಯನ್ನು ಹಳ್ಳದಲ್ಲಿ ಅಡ್ಡವಾಗಿ ಹಾಕಿ ರಸ್ತೆದಾಟಬೇಕಾದ ಪರಿಸ್ಥಿತಿ ಇದೆ. ಇಂತಹ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಇದ್ದು, ಚಿಕ್ಕಪುಟ್ಟ ಮಕ್ಕಳು ಈ ಹಳ್ಳ ದಾಟಿ ಹೋಗಿ ಬರಬೇಕಾದರೆ, ಪೋಷಕರು ಜೊತೆಗೆ ಇದ್ದು, ಈ ಹಳ್ಳವನ್ನು ದಾಟಿಸಬೇಕು. ಒಂದು ವೇಳೆ ಮಳೆ ಬಂತೆಂದರೆ ಹಳ್ಳದಲ್ಲಿ ಭಾರೀ ನೀರು ಹರಿಯುವುದರಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ದಾಟಲು ಸಾಧ್ಯವೇ ಇಲ್ಲ. ಈ ಬಗ್ಗೆ ಹಲವು ಬಾರಿ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನು  ಸೇತುವೆ ಕುಸಿದು ಬಿದ್ದಿರುವ ಬಗ್ಗೆ ಶಾಸಕರಿಗೂ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಶಾಸಕರು ಗಮನಹರಿಸಿಲ್ಲ. ಕೇಳಿದಾಗಲೆಲ್ಲಾ ಸೇತುವೆ ಮಾಡಿಕೊಡುವುದಾಗಿ ಹೇಳುತ್ತಾರೆ ವಿನಃ ಸೇತುವೆ ನಿರ್ಮಿಸಿಲ್ಲ.

ವಾರದಲ್ಲಿ ಭೂ ಪರಿವರ್ತನೆಗಾಗಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ