Nov 17, 2022, 3:13 PM IST
ರಾಯಚೂರು (ನ. 17): ಬಡವರು ಕೂಡ ಗೌರವದಿಂದ ಕಡಿಮೆ ವೆಚ್ಚದಲ್ಲಿ ಸಭೆ-ಸಮಾರಂಭ ಮಾಡಬೇಕೆಂದು ಸರ್ಕಾರ 5 ಕೋಟಿ ವೆಚ್ಚದಲ್ಲಿ ಬಾಬಾ ಜಗಜೀವನರಾಮ್ ಮತ್ತು ಅಂಬೇಡ್ಕರ್ ಭವನ ನಿರ್ಮಾಣ ಮಾಡಿದೆ. ಭವನದಲ್ಲಿ ಕುರ್ಚಿ ಮತ್ತು ಪಿಠೋಪಕರಣ ಇಲ್ಲವೆಂಬ ಕಾರಣಕ್ಕೆ ವರ್ಷ ಕಳೆದರೂ ಭವನದ ಉದ್ಘಾಟನೆ ಆಗುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದ ವಸ್ತುಗಳು ಧೂಳು ಹಿಡಿಯುತ್ತಿದ್ದು, ಈ ಬಗ್ಗೆ ಸ್ಥಳಿಯರು ಅಧಿಕಾರಿ, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಯಚೂರು ನಗರದ ಕೇಂದ್ರ ಭಾಗದಲ್ಲ ಬೃಹತ್ ಭವನದಲ್ಲಿ ಮದುವೆ ಮತ್ತು ವಿವಿಧ ಸಭೆ-ಸಮಾರಂಭಗಳು ನಡೆಯಬೇಕಾಗಿತ್ತು. ಆದ್ರೆ ನಿರ್ಮಾಣಗೊಂಡ ಭವನದಲ್ಲಿ 50-60 ಲಕ್ಷ ರೂಪಾಯಿ ವೆಚ್ಚದ ಪಿಠೋಪಕರಣ ಖರೀದಿಗಾಗಿ ಟೆಂಡರ್ ಮಾಡಿದ್ರೂ ಇನ್ನೂ ಪಿಠೋಪಕರಣ ಅಳವಡಿಕೆ ಮಾತ್ರ ಮಾಡುತ್ತಿಲ್ಲ. ಕಟ್ಟಡದ ಜೊತೆಗೆ ಪಿಠೋಪಕರಣದ ಟೆಂಡರ್ ಮಾಡದೇ ಇರುವುದು ಹೋರಾಟಗಾರರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.
ಇನ್ನೂ ಬೃಹತ್ ಅಂಬೇಡ್ಕರ್ ಭವನ ನಿರ್ಮಾಣಗೊಂಡು ವರ್ಷಗಳೇ ಕಳೆಯುತ್ತಿದೆ. ಉದ್ಘಾಟನೆ ಆಗದೇ ಇರುವುದರಿಂದ, ಭವನದಲ್ಲಿನ ಬೆಲೆ ಬಾಳುವ ವಸ್ತುಗಳು ಧೂಳು ಹಿಡಿದು ಹಾಳಾಗಿ ಹೋಗುತ್ತಿವೆ. ಇದರಿಂದಾಗಿ ಕೂಡಲೇ ಭವನ ಉದ್ಘಾಟನೆ ಮಾಡಿ ಬಡವರಿಗೆ ಅನುಕೂಲ ಮಾಡಿಕೊಡಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬ್ಯಾಲಾಳ ಗ್ರಾಮದಲ್ಲಿ ಇಲ್ಲ ಸ್ಮಶಾನ: ಅಂತ್ಯಕ್ರಿಯೆಗೆ ಪರದಾಟ
ಒಟ್ಟಿನಲ್ಲಿ ಸರ್ಕಾರ ಕೋಟಿ ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದೆ. ಆದ್ರೆ ಪೀಠೋಪಕರಣ ಇಲ್ಲ ಅನ್ನೋ ಕಾರಣಕ್ಕೆ ಭವನ ಉದ್ಘಾಟನೆ ಮಾಡಲು ಹಿಂದೇಟು ಹಾಕಿರೋದು ಬೇಸರದ ಸಂಗತಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ, ಅಲ್ಲಿನ ಸಮಸ್ಯೆ ಬಗೆ ಹರಿಸಿ, ಜನರಿಗೆ ಅನುಕೂಲ ಮಾಡಿಕೊಡಿ ಅನ್ನೋದು ಬಿಗ್-3 ಆಗ್ರಹ.