BIG 3: ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ: ವಿದ್ಯಾರ್ಥಿಗಳಿಗೆ ನರಕಯಾತನೆ

Sep 9, 2022, 8:00 PM IST

ಚಿಕ್ಕಮಗಳೂರು (ಸೆ. 09): ಕುಸಿಯುವ ಹಂತದಲ್ಲಿರುವ ಕಟ್ಟಡ, ಶಿಥಿಲಾವಸ್ಥೆಗೆ ತಲುಪಿರವ ಕಟ್ಟಡದ ಕಾರಿಡಾರ್‌ ಮೇಲೆ ಓಡಾಡುತ್ತಿರವ ಮಕ್ಕಳು. ಇದು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ನರಸಿಂಹರಾಜಪುರದಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ (Karnataka Public School) ಹಳೆ ಕಾಲೇಜು ಕಟ್ಟಡದ ದುರಾವಸ್ಥೆ. ಕಟ್ಟಡದ ಪಾಳುಬಿದ್ದಿರುವ ಸ್ಥಿತಿಗೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಕಾಲೇಜು ವಿಭಾಗದ ಐದು ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ. 

ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡು ಪ್ರಯೋಜಕ್ಕೆ ಬಾರದಂತಾಗಿವೆ. ಈಗ ಇದೇ ಕೊಠಡಿಗಳು ವಿಷ ಜಂತುಗಳ ವಾಸಸ್ಥಾನವಾಗಿವೆ. ಅಲ್ಲದೇ ಕೊಳಚೆಯಂತಾಗಿ ನಿರಂತರ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಹೊಸ ಕಟ್ಟಡಲ್ಲಿ ಪಾಠ ಕೇಳು ವಿದ್ಯಾರ್ಥಿಗಳಿಗೆ ನರಕಯಾತನೆ ಶುರುವಾಗಿದೆ. ಶತಮಾನದ ವರ್ಷಗಳ ಕಂಡ ಶಾಲೆ ಇತ್ತೀಚೆಗೆ ಕರ್ನಾಟಕ ಪಬ್ಲಿಕ್‌ ಶಾಲೆ ಎಂಬ ಕೀರ್ತಿ ಪಡೆದಿದ್ದು, ಪ್ರಾಥಮಿಕ ಪೌಢ ಶಾಲೆ ವಿಭಾಗ ಮತ್ತು ಕಾಲೇಜು ವಿಭಾಗಗಳ ತರಗತಿಗಳು ನಡೆಯುತ್ತಿವೆ. ಈ ಬಗೆಗಿನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ 3 (Big 3 Report) ಕಂಪ್ಲೀಟ್‌ ವರದಿ ಇಲ್ಲಿದೆ

BIG 3: ಕೋಟಿ ಕೋಟಿ ಹಣದಲ್ಲಿ ಕಟ್ಟಿದ ಆಸ್ಪತ್ರೆಯಲ್ಲಿಲ್ಲ ಶವಾಗಾರ: ಸುರಪುರದ ಕೆಂಭಾವಿಯ ನರಕಯಾತನೆ