Feb 28, 2023, 11:36 AM IST
ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ್ರು. ಗ್ರಾಮದ ಟ್ಯಾಂಕಿನ ನೀರು ಕಲುಷಿತಗೊಂಡು ಇದೇ ನೀರು ಹಲವರ ಜೀವಕ್ಕೆ ಕಂಠಕವಾಯ್ತು. ಜಿಲ್ಲಾಡಳಿತ ಎಚ್ಚೆತ್ತು ಮುಂದಿನ ಕ್ರಮಕ್ಕೆ ಮುಂದಾಯ್ತು. ಆದ್ರೆ ಸಾವಿಗೀಡಾದ ಕುಟುಂಬಕ್ಕೆ ಪರಿಹಾರ ಮಾತ್ರ ಕೊಟ್ಟಿರಲಿಲ್ಲ. ಈ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅಧಿವೇಶನದಲ್ಲಿ ಅನಪುರ ಘಟನೆ ಪ್ರಸ್ತಾಪಿಸಿದರು. ಮೃತ ಕುಟುಂಬದ ಸದಸ್ಯರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದ್ರು. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಕೂಡ ತಕ್ಷಣವೇ ಪರಿಹಾರ ನೀಡುವಂತೆ ಸಿಎಂಗೆ ಮನವಿ ಪತ್ರ ಕೂಡ ಬರೆದರು. ಸಿಎಂ ಸ್ಪಂದನೆ ನೀಡಿದ್ದು, ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆಯ ಆದೇಶ ಕೂಡ ಹೊರಬಿದ್ದಿದೆ.