ಬೀದರ್‌ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳಿಲ್ಲದೇ ಜನ ಕಂಗಾಲು..!

Sep 3, 2023, 11:30 AM IST

ರಸ್ತೆ ಇಲ್ಲ.. ಚರಂಡಿ ಇಲ್ಲ.. ವಿದ್ಯುತ್ ದೀಪಗಳೂ ಸರಿಯಾಗಿಲ್ಲ. ಒಟ್ಟಿನಲ್ಲಿ ಜನರಿಗೆ ಮೂಲ ಸೌಲಭ್ಯಗಳೇ ಸಿಗ್ತಿಲ್ಲ. ಇದು ಗಡಿ ಜಿಲ್ಲೆ ಬೀದರ್(Bidar) ಜನರ ದುಸ್ಥಿತಿ. 20 ವರ್ಷಗಳಿಂದ ಈ ಜನರಿಗೆ ಮೂಲಸೌಕರ್ಯ(Basic Facility) ಅನ್ನೋದು ಕನಸಾಗಿದೆ. ಬೀದರ್ ನಗರದ ಸಾಯಿ ನಗರದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. 20 ವರ್ಷದಿಂದ ಸರಿಯಾದ ರಸ್ತೆಗಳಿಲ್ಲ, ಚರಂಡಿ ಅಂತೂ ಕಾಣಿಸಿಗೋದೆ ಇಲ್ಲ. ಅಲ್ಲಲ್ಲಿ ಒಂದೋ ಎರಡೊ ಸ್ಟ್ರೀಟ್ ಲೈಟ್ ಕಾಣಿಸುತ್ತವೆ. ಪೌರಾಡಳಿತ ಸಚಿವ ರಹೀಂ ಖಾನ್ (Municipal Administration Minister Rahim Khan)ತವರು ಕ್ಷೇತ್ರದಲ್ಲೇ ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಅಂತಾರೆ ನಿವಾಸಿಗಳು. ಚರಂಡಿ ನೀರು ಅಲ್ಲಲ್ಲಿ ನಿಲ್ಲುವುದರಿಂದ ಸಾಂಕ್ರಮಿಕ ರೋಗದ ಭೀತಿ ಕಾಡುತ್ತಿದೆ. ಕರೆಂಟ್ ಇಲ್ಲದಿರೋದ್ರಿಂದ ರಾತ್ರಿ ಹೊತ್ತಲ್ಲಿ ಕಳ್ಳರ ಕಾಟ ಕೂಡ ಹೆಚ್ಚಿದೆ‌. ಈ ಬಾರಿ ಕ್ಷೇತ್ರದ ಶಾಸಕರೇ ಸಚಿವರಾಗಿದ್ದಾರೆ. ಈಗಲಾದ್ರೂ ಸಚಿವರು ಈ ಜನರ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ.

ಇದನ್ನೂ ವೀಕ್ಷಿಸಿ:  ಕೋಲಾರದಲ್ಲಿ ಬತ್ತುತ್ತಿವೆ ಕೆರೆ, ಬಾವಿಗಳು: ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ರೈತರ ಆಗ್ರಹ