Sep 6, 2022, 6:15 PM IST
ಬೆಂಗಳೂರು (ಸೆ. 06): ರಾಜಧಾನಿ ಬೆಂಗಳೂರಿನಲ್ಲಿ (Bengaluru) ಅಬ್ಬರಿಸುತ್ತಿರುವ ವರುಣನ ಆರ್ಭಟಕ್ಕೆ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಪಾಲಿಕೆ ವ್ಯಾಪ್ತಿಯ 160ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಬಿದ್ದಿದ್ದು ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯದ ಅನೇಕ ಜನವಸತಿ ಪ್ರದೇಶಗಳು ಮುಳುಗಡೆಯಾಗಿವೆ. ಮಳೆ ಜನಜೀವನವನ್ನಷ್ಟೇ ಅಲ್ಲಲ್ಲೇ ಐಟಿ ಹಬ್ (IT Hub)ಎಂದೇ ಪರಿಗಣಿಸಲಾಗಿರುವ ಪ್ರದೇಶಗಳು ಜಲಾವೃತಗೊಂಡು ಕೋಟ್ಯಾಂತರ ರು. ನಷ್ಟ ಸಂಭವಿಸಿದೆ.
ಬೆಳ್ಳಂದೂರು, ವರ್ತೂರು, ವಿಭೂತಿಪುರ, ಕನ್ಹಹಳ್ಳಿ, ಸವಳುಕೆರೆ, ಬೇಗೂರು ಕೆರೆ, ಯಲಹಂಕ ಕೆರೆ, ದೊರೆ ಕೆರೆ, ಜಕ್ಕೂರು ಕೆರೆ ಸೇರಿದಂತೆ 160ಕ್ಕೂ ಹೆಚ್ಚು ಕೆರೆಗಳು ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಭರ್ತಿಯಾಗಿವೆ. ಇವುಗಳಲ್ಲಿ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು, ಹೊರ ಹರಿವು ಹೆಚ್ಚಾಗಿದೆ. ಜೊತೆಗೆ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜಕಾಲುವೆಗಳು ಕೂಡ ತುಂಬಿ ಹರಿಯುತ್ತಿವೆ. ಪರಿಣಾಮ ಕೆಲವು ಬಡಾವಣೆಗಳು ಜಲಾವೃತಗೊಂಡಿದ್ದರೆ, ಹಲವು ಮನೆಗಳಿಗೆ ನೀರು ನುಗ್ಗಿ ಸಂಕಷ್ಟತಂದೊಡ್ಡಿದೆ.
Bengaluru Rain: ರೈನ್‌ಕೋಟು ಧರಿಸಿ ನಾಯಿಮರಿ ವಾಕಿಂಗ್ ವೀಡಿಯೋ ವೈರಲ್
ಮಳೆಗೆ ಬೆಳಂದೂರಿನ ಮುನೇನಕೊಳಲಿನ ತಗ್ಗು ಪ್ರದೇಶವೊಂದರಲ್ಲೇ 1500ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಮಳೆಯಾದಾಗಲೆಲ್ಲಾ ಬೆಂಗಳೂರಿಗೆ ಮಹಾ ಜಲಕಂಟಕ ಎದುರಾಗುತ್ತಿದೆ. ಸ್ವಲ್ಪ ಮಳೆಯಾದ್ರೂ ಸಾಕು ಬೆಂಗಳೂರು ಮುಳುಗಿ ಹೋಗುತ್ತಿದೆ. ರಾಜಧಾನಿಗೆ ಎದುರಾಗಿದ್ದೇಕೆ ಇಂಥಾ ದುಸ್ಥಿತಿ? ಇದು ಟ್ರೈಲರ್, ಮುಂದೆ ಕಾದಿದೆ ಅಸಲಿ ಸಿನಿಮಾ ಅಂತ ವಾರ್ನಿಗ್ ಕೊಟ್ಟನಾ ವರುಣದೇವ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಜಲಸಮಾಧಿ ರಹಸ್ಯ