Jan 16, 2025, 9:00 PM IST
ಅವಳು ಒಂಟಿ ಜೀವನ ನಡೆಸುತ್ತಿದ್ದ ದಿಟ್ಟ ಮಹಿಳೆ. ಕಳೆದ 5 ವರ್ಷದ ಹಿಂದೆ ತನಗಿಂತ ವಯಸ್ಸಿನಲ್ಲಿ 15 ವರ್ಷ ಹಿರಿಯನಾದ ವ್ಯಕ್ತಿಯನ್ನು ಕುಟುಂಬದವರ ಬಲವಂತಕ್ಕೆ ಮಣಿದು ಮದುವೆಯಾಗಿದ್ದಳು. ಆದರೆ ಹೊಂದಾಣಿಕೆ ಕೊರತೆಯಿಂದ ಕಳೆದ 3 ವರ್ಷದ ಹಿಂದೆ ಡಿವೋರ್ಸ್ ತೆಗೆದುಕೊಂಡಿದ್ದಳು. ಇದೀಗ ಇದೇ ಮಹಿಳೆ ನನಗೆ ಮೋಸವಾಗಿದೆ, ನನ್ನ ಹೊಟ್ಟೆಯಲ್ಲಿ ನನ್ನ ಮಗು ಇದೆ. ನನ್ನನ್ನ ನಂಬಿಸಿ ಮೋಸ ಮಾಡಲಾಗಿದೆ ಅಂತ ಬಂದು ಪೊಲೀಸ್ ಠಾಣೆ ಎದುರು ಕಾಣ್ಣೀರು ಹಾಕುತ್ತಾ ನಿಂತಿದ್ದಾಳೆ. ಅಷ್ಟಕ್ಕೂ ಮೊದಲ ಮದುವೆ ಮುರಿದ ಮೇಲೆ ಈಕೆ ಲೈಫ್‌ಗೆ ಎಂಟ್ರಿ ಕೊಟ್ಟವನು ಬಿಎಂಟಿಸಿ ಬಸ್ ಕಂಡಕ್ಟರ್. ಆಕೆ ಅವನಿಂದ ಮೋಸ ಹೋಗಿದ್ದು ಹೇಗೆ.? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ..
ಬಿಎಂಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಲಕ್ಷಾಂತರ ಬಾಲಕಿಯರು, ಯುವತಿಯರು, ಮಹಿಳೆಯರು ಸಂಚಾರ ಮಾಡುತ್ತಾರೆ. ಆದರೆ, ಬಸ್ ಹತ್ತೋ ಹೆಣ್ಣುಮಕ್ಕಳ ವೀಕ್‌ನೆಸ್ ಅನ್ನೇ ಬಳಸಿಕೊಳ್ಳುವ ಚಾಲಿ ಹೊಂದಿದ್ದ ಕಂಡಕ್ಟರ್ ಇಲ್ಲಿ ಗಂಡನಿಂದ ಡಿವೋರ್ಸ್ ಪಡೆದು ಒಬ್ಬಂಟಿಯಾಗಿದ್ದ ಮಹಿಳೆಯ ಬಾಳಿಗೆ ಬೆಳಕಾಗುವ ಭರವಸೆ ನೀಡಿದ್ದಾನೆ. ನಂತರ, ಈಕೆಯನ್ನು ಕರೆದುಕೊಂಡು ಎಲ್ಲೆಡೆ ಸುತ್ತಾಡಿದ್ದಾನೆ. ಮಾತಿನಲ್ಲಿಯೇ ಮನೆ ಕಟ್ಟಿ, ಆಕಾಶ ಗೋಪುರವನ್ನು ಹತ್ತಿಸಿ ಚಂದಮಾಮನನ್ನು ತೋರಿಸಿದ್ದಾನೆ.
ನಂತರ, ಬಣ್ಣದ ಮಾತನಾಡಿ ದೈಹಿಕವಾಗಿಯೂ ಆಕೆಯನ್ನು ಬಳಸಿಕೊಂಡಿದ್ದಾನೆ. ಇನ್ನೇನು ಮಹಿಳೆ ಗರ್ಭಿಣಿ ಆಗುತ್ತಿದ್ದಂತೆ ಆಕೆಗೆ ಕೈಕೊಟ್ಟು ಪರಾರರಿ ಆಗಿದ್ದಾನೆ. ಆತನ ಪೂರ್ವಾಪರ ವಿಚಾರಣೆ ಮಾಡಿದರೆ, ಆತನಿಗೆ ಈಗಾಗಲೇ ಮದುವೆಯೂ ಆಗಿದ್ದು, ಇಲ್ಲಿ ಬೆಂಗಳೂರಿನ ಯುವತಿಗೆ ಮೋಸ ಮಾಡಿ, ಆಕೆಯ ಮಡಿಲಿಗೆ ಮಗುವನ್ನು ಕರುಣಿಸಿ ಓಡಿ ಹೋಗಿದ್ದಾನೆ. ಮಹಿಳೆಯರ ವೀಕ್ನೆಸ್ ತಿಳಿದು ಮೋಸ ಮಾಡುವ ಮಂಜುನಾಥ ನಂತಹ ಕಂಡಕ್ಟರ್‌ಗಳು ತುಂಬಾ ಮಂದಿ ಇದ್ದಾರೆ. ಇಂಥವರಿಗೆ ತಕ್ಕ ಪಾಠವಾಗಬೇಕಾದರೆ ಈ ಮಂಜುನಾಥನಿಗೆ ಶಿಕ್ಷೆಯಾಗಬೇಕು. ಆದರೆ ಮಹಿಳೆ ತನಗೆ ಮಂಜುನಾಥ ಬೇಕು ಆಗ್ರಹಿಸಿದ್ದಾಳೆ.