Sep 4, 2023, 11:12 AM IST
ಕಳೆದ ಒಂದು ವರ್ಷದ ಹಿಂದೆ ಬಳ್ಳಾರಿಯ (Bellary) ವಿಮ್ಸ್ನಲ್ಲಿ ಆಕ್ಸಿಜನ್ ದುರಂತದಲ್ಲಿ(Vims oxygen disaster) ಮಡಿದವರ ಕುಟುಂಬಸ್ಥರು...ಆಸ್ಪತ್ರೆಯಲ್ಲಿ ಕರೆಂಟ್ ಸ್ಥಗಿತಗೊಂಡು ಆಕ್ಸಿಜನ್ ಸಪ್ಲೈ ಆಗದೇ ಮೃತಪಟ್ಟಿದ್ರು. ಆಗಸ್ಟ್ 22ಕ್ಕೆ ವರದಿ ಪ್ರಸಾರ ಮಾಡಿ ಸಿಎಂ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಗಮನಕ್ಕೆ ತಂದಿದ್ವಿ. ಕೂಡಲೇ ಸ್ಪಂದಿಸಿದ ಪ್ರಭಾಕರ್ ಮತ್ತು ಸಿಎಂ ಜಂಟಿ ಕಾರ್ಯದರ್ಶಿ ಗೋಪಾಲ್ರವರು, ಸಿಎಂ ಗಮನಕ್ಕೆ ತಂದು ಪರಿಹಾರದ ಹಣ(Money) ಬಿಡುಗಡೆ ಮಾಡಿಸಿಯೇ ಬಿಟ್ರು. ಪರಿಹಾರಕ್ಕಾಗಿ ಕಳೆದ 1 ವರ್ಷದಿಂದ ಮೃತರ ಕುಟುಂಬಸ್ಥರು ಸುತ್ತದೇ ಇರೋ ಜಾಗವಿರಲಿಲ್ಲ. ಆದ್ರೆ ಬಿಗ್ 3 ಎಂಟ್ರಿ ಕೊಡ್ತು ನೋಡಿ, ಮುಂದೆ ನಡೆದಿದ್ದೆಲ್ಲ ಮಹಾ ಪವಾಡ. ಇನ್ನೂ ಪರಿಹಾರದ ಚೆಕ್ ಪಡೆದ ಫಲಾನುಭವಿಗಳು ಬಿಗ್ 3ಗೆ ಥ್ಯಾಂಕ್ಸ್ ಹೇಳಿದ್ರು. ಬಿಗ್-3 ಅಂದ್ರೆ ಹೀಗೆ ನೋಡಿ ಹಿಡಿದ ಕೆಲಸ ಬಿಡೋದಿಲ್ಲ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
ಇದನ್ನೂ ವೀಕ್ಷಿಸಿ: ಜಿ-20 ಸಭೆ: ವಿಶ್ವದ ಗಣ್ಯರ ಸ್ವಾಗತಕ್ಕೆ ಸಜ್ಜಾಗುತ್ತಿದೆ ಭಾರತ !