Aug 28, 2022, 3:31 PM IST
ಬೆಳಗಾವಿ (ಆ. 28): ಬೆಳಗಾವಿ ಕ್ಲಬ್ ರಸ್ತೆಯ ಗಾಲ್ಫ್ ಕೋರ್ಸ್ ಮೈದಾನಕ್ಕೆ ನುಸುಳಿರುವ ಚಿರತೆ ಶೋಧ ಕಾರ್ಯಾಚರಣೆ 24ನೇ ದಿನಕ್ಕೆ ಕಾಲಿಟ್ಟಿದೆ. ಗಾಲ್ಫ್ ಮೈದಾನದ ತಡೆಗೋಡೆಗೆ ಎರಡು ಕಿಮೀ ಉದ್ದದ ಬಲೆ ಕಟ್ಟಿ ಚಿರತೆ ಸೆರೆಗೆ ನಿರ್ಧರಿಸಲಾಗಿದೆ. ಚಿರತೆ ತಡೆಗೋಡೆ ಜಿಗಿದು ಜನವಸತಿ ಪ್ರದೇಶಕ್ಕೆ ತೆರಳದಂತೆ ನಿಗಾ ವಹಿಸಲಾಗಿದೆ. ಜೊತೆಗೆ ವನಿತಾ ವಿದ್ಯಾಲಯದ ಬಳಿ ರಸ್ತೆ ದಾಟಿದ್ದ ಕ್ಲಬ್ ರಸ್ತೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಗೇಟ್ ಮೇಲೆರಿ ಗಾಲ್ಫ್ ಮೈದಾನ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತೆಯರು ಯತ್ನಿಸಿರುವ ಘಟನೆ ನಡೆದಿದೆ.
ಗಾಲ್ಫ್ ಮೈದಾನದ ಗೇಟ್ ಏರಿ ಕೈ ಕಾರ್ಯಕರ್ತೆ ಆಯೀಷಾ ಸನದಿ ಹೈಡ್ರಾಮಾ ಮಾಡಿದ್ದಾರೆ. ಬಳಿಕ ಗೇಟ್‌ನಿಂದ ತಾವೇ ಇಳಿದು ಗೇಟ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಆಯೀಷಾ ಸನದಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರ ಧರಣಿ ನಡೆಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಕಾಂಗ್ರೆಸ್ ಕಾರ್ಯಕರ್ತೆಯರ ಪ್ರತಿಭಟನೆ ನಡೆಸಿದ್ದು ಅರಣ್ಯ ಸಚಿವ ಉಮೇಶ್ ಕತ್ತಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಹಿಗಾಗಿ ಚಿರತೆ ಪತ್ತೆಯಾಗದ ವಿಚಾರ ಈಗ ರಾಜಕೀಯ ಸ್ವರೂಪ ಪಡೆದಿದೆ.
ಪತ್ತೆಯಾಗದ ಚಾಲಾಕಿ ಚಿರತೆ ಬಗ್ಗೆ ಟ್ರೋಲ್: ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಸಮೇತ ಬೆಳಗಾವಿ ರಾಜಕಾರಣಕ್ಕೂ ಎಂಟ್ರಿ!