ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡನೆಗೆ ಬೆಳಗಾವಿ ಅಧಿವೇಶನ ಸಾಕ್ಷಿಯಾಗುತ್ತಾ ಎಂಬ ಚರ್ಚೆ ಶುರುವಾಗಿದೆ.
ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಚಿಂತನೆ ನಡೆಸಲಾಗಿದ್ದು, ಕಾಯ್ದೆ ಜಾರಿಗೆ ಮುನ್ನ ಗಂಭೀರ ಚರ್ಚೆಗೆ ವೇದಿಕೆ ಸಿದ್ಧವಾಗಿದೆ. ಬೆಳಗಾವಿ ಅಧೀವೇಶನದಲ್ಲಿ ವಿಧೇಯಕ ಮಂಡನೆಗೆ ತಯಾರು ನಡೆಸಲಾಗಿದೆ. ಹಲವು ಲೆಕ್ಕಾಚರದೊಂದಿಗೆ ಯುಸಿಸಿ ಕಾಯ್ದೆ ಜಾರಿ ವಿಧೇಯಕ ಕುರಿತು ಸಾರ್ವಜನಿಕವಾಗಿಯೂ ಗಂಭೀರ ಚರ್ಚೆ ನಡೆದಿದೆ. ಸಮಿತಿ ಸಂಗ್ರಹಿಸಿದ ಒಂದು ಲಕ್ಷ ಸಲಹೆಗಳ ವಿವರವನ್ನು ಸರ್ಕಾರ ಪಡೆದಿದ್ದು, ಭಾವನಾತ್ಮಕ ವಿಚಾರದಲ್ಲಿ ಅಧಿವೇಶನ ನಡೆಸಲು ಪ್ಲಾನ್ ಮಾಡಲಾಗಿದೆ.