ಮಂಗಳೂರು: ಸರಣಿ ಅಪಮೃತ್ಯುಗಳ ಹಿಂದಿದ್ಯಾ ತುಳುನಾಡಿನ ಕಾರ್ಣಿಕ ದೈವದ ಮುನಿಸು?

ಮಂಗಳೂರು: ಸರಣಿ ಅಪಮೃತ್ಯುಗಳ ಹಿಂದಿದ್ಯಾ ತುಳುನಾಡಿನ ಕಾರ್ಣಿಕ ದೈವದ ಮುನಿಸು?

Published : Jan 28, 2025, 10:53 AM IST

ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆಯಿಂದ ಇಂದು ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ದೇವರ ಪುಣ್ಯದ ಮಣ್ಣಿನಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. 2019ರಿಂದ 2024ರ ವರೆಗೆ ಕುಂಪಲದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಮರಣಗಳು ಸಂಭವಿಸಿದೆ. ಪ್ರಶ್ನಾ ಚಿಂತನೆಯಲ್ಲಿ ಹಲವಾರು ವರ್ಷಗಳ ಹಿಂದಿನ ದೈವ ಸಾನಿಧ್ಯದ ಸುಳಿವು ನೀಡಿದ್ದರು. 

ಮಂಗಳೂರು(ಜ.28):  ಮಹಾಮೃತ್ಯುಂಜಯ ಯಾಗದ ಮೂಲದ ಸಾವು-ನೋವು ತಡೆಗೆ ಗ್ರಾಮಸ್ಥರು ಹೆಜ್ಜೆ ಇಟ್ಟಿದ್ದಾರೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದ ಕಳೆದ ಐದು ವರ್ಷಗಳಲ್ಲಿ ಸರಣಿ ಸಾವುಗಳು ಸಂಭವಿಸಿವೆ. ಪ್ರಶ್ನಾ ಚಿಂತನೆಯಲ್ಲಿ ಕುಂಪಲದ ಕಾರ್ಣಿಕ ದೈವದ ಮುನಿಸಿನ ಬಗ್ಗೆ ಚರ್ಚೆಯಾಗಿದೆ. ಸದ್ಯ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಸಾವು-ನೋವು ತಡೆಗೆ ಕುಂಪದಲ್ಲಿ ಮಹಾಮೃತ್ಯುಂಜಯ ಯಾಗ ನಡೆಸಲು ನಿರ್ಧರಿಸಲಾಗಿದೆ. 

ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆಯಿಂದ ಇಂದು ಮಹಾಮೃತ್ಯುಂಜಯ ಯಾಗ ನಡೆಯಲಿದೆ. ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ದೇವರ ಪುಣ್ಯದ ಮಣ್ಣಿನಲ್ಲಿ ಮಹಾಮೃತ್ಯುಂಜಯ ಯಾಗ ನಡೆಯಲಿದೆ. 2019ರಿಂದ 2024ರ ವರೆಗೆ ಕುಂಪಲದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಮರಣಗಳು ಸಂಭವಿಸಿದೆ. ಪ್ರಶ್ನಾ ಚಿಂತನೆಯಲ್ಲಿ ಹಲವಾರು ವರ್ಷಗಳ ಹಿಂದಿನ ದೈವ ಸಾನಿಧ್ಯದ ಸುಳಿವು ನೀಡಿದ್ದರು. ಅಕಾಲಿಕ ಮರಣಗಳ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ದೈವ ಮುನಿಸಿನ ಸುಳಿವು ಸಿಕ್ಕಿತ್ತು. ಕುಂಪಲದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯವೊಂದಿದ್ದು, ದೈವಕ್ಕೆ ಕಾಲಾದಿ ಸೇವೆಗಳು ಸಲ್ಲಿಕೆಯಾಗುತ್ತಿದ್ದ ಮಾಹಿತಿ ಲಭ್ಯವಾಗಿದೆ. ಆದರೆ ಯಾವುದೋ ಕಾರಣಕ್ಕೆ ಅದು ನಿಂತು ಹೋಗಿದ್ದು, ಸದ್ಯ ಆ ಸಾನಿಧ್ಯದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಸುಳಿವು ಸಿಕ್ಕಿತ್ತು. ದೈವ ಸಾನಿಧ್ಯ ಪತ್ತೆಗೂ ಮೊದಲು ಗ್ರಾಮದ ಒಳಿತಿಗೆ, ಸಾವುಗಳನ್ನು ತಡೆಗಟ್ಟಲು ಮಹಾಮೃತ್ಯುಂಜಯ ಯಾಗ ನಡೆಸಲು ತೀರ್ಮಾನಿಸಲಾಗಿದೆ.  

Kotekar Bank Robbery in Mangaluru: ರಾಜ್ಯ ಬೆಚ್ಚಿಬೀಳಿಸಿದ್ದ ದರೋಡೆ ಕೇಸ್ ಬೇಧಿಸಿದ ಪೊಲೀಸರು | Suvarna News

ಕುಂಪದಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಭಾರೀ ಆತಂಕ ಸೃಷ್ಟಿಯಾಗಿದೆ. ಆತ್ಮಹತ್ಯೆ ಪ್ರಕರಣಗಳ ಜೊತೆಗೆ ಅಪಘಾತ ಹಾಗೂ ದಿಢೀರ್‌ ಅನಾರೋಗ್ಯದ ಸಾವುಗಳೇ ಹೆಚ್ಚು ಸಂಭವಿಸಿವೆ. ದೈವದ ಅಸಾಮಧಾನದ ಕಾರಣಕ್ಕೆ ಕುಂಪಲದಲ್ಲಿ ಅಕಾಲಿಕ ಸಾವುಗಳಾಗುತ್ತಿರೋ ಆತಂಕ ಎದುರಾಗಿದೆ. ಸಣ್ಣ ವಯಸ್ಸಿನ ಯುವಕ-ಯುವತಿಯರ ಆತ್ಮಹತ್ಯೆಗಳೇ ಹೆಚ್ಚು ಸಂಭವಿಸಿವೆ. ಸರಣಿ ಸಾವು ತಡೆಗೆ ಮಹಾಮೃತ್ಯುಂಜಯ ಯಾಗಕ್ಕೆ ಗ್ರಾಮದ ಯುವ ಸಂಘಟನೆ ಮುಂದಾಗಿದೆ. ಪ್ರಶ್ನೆ ಚಿಂತನೆಯಲ್ಲಿ ಸರಣಿ ಸಾವುಗಳ ಆಪತ್ತಿನ ಬಗ್ಗೆ ಉಲ್ಲೇಖಿಸಲಾಗಿದೆ.

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more