ರಾಯಚೂರು: ಜಮೀನು ಖರೀದಿಗೆ ಬಂದವನ ಮೇಲೆ ಗೂಂಡಾಗಿರಿ, ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ

Jan 9, 2025, 12:05 PM IST

ರಾಯಚೂರು(ಜ.09):  ಜಮೀನು ಖರೀದಿಗೆ ಬಂದವನ ಮೇಲೆ ಗೂಂಡಾಗಿರಿ ಮಾಡಿ ಹಲ್ಲೆ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ. ಎದೆ ಝಲ್ಲೆನೆಸುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಲ್ಕೋಡ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೀಮಣ್ಣ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ದುಷ್ಕರ್ಮಿಗಳು. ಸಣ್ಣವದರ ವಿಜಯಕುಮಾರ್‌, ಶಿವಕುಮಾರ್‌, ಶೇಶಪ್ಪ ಎಂಬುವರು ಕಲ್ಲು, ಕಟ್ಟಿಗೆಗಳಿಗೆ ಭೀಮಣ್ಣನೆ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. 

ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?