ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?

ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?

Published : Sep 30, 2021, 06:02 PM IST

ಪ್ರತಿ ವರ್ಷ ಮೈಸೂರು ದಸರಾ ನೋಡೊಕೆ ನಾವೆಲ್ಲ ಕಾತರದಿಂದ ಕಾಯ್ತಿವಿ. ಅದ್ರಲ್ಲೂ ಜಂಬೂ ಸವಾರಿಯಲ್ಲಿ ಸಾಗೋ ಆನೆಗಳನ್ನ ನೋಡೋಕೆ ಮಕ್ಕಳು ತುದಿಗಾಗಲ್ಲಿ ನಿಂತಿರ್ತಾರೆ. ಆದ್ರೆ ಇಲ್ಲಿ ಆನೆಯೇ ಜಂಬೂ ಸವಾರಿ ನೋಡಿಕೊಂಡು ಹೋಗೊಕೆ ಬಂದಿದೆ ಅಂದ್ರೆ ನೀವು ನಂಬಲೇ ಬೇಕು. ಮೊದಲ ಬಾರಿ ಮೈಸೂರಿಗೆ ಎಂಟ್ರಿ ಕೊಟ್ಟಿರೋ ಈ ತರುಣ ಆನೆಗೆ ನಗರದ ಭಯ ಈಗಷ್ಟೇ ಕಡಿಮೆ ಆಗ್ತಿದೆ.

ಮೈಸೂರು(ಸೆ.30): ಜಂಬೂ ಸವಾರಿ ಟೀಂನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿರೋ 34 ವರ್ಷದ ಅಶ್ವತ್ಥಾಮ ಆನೆ ವಿಚಾರವನ್ನ. ಗಜಪಡೆಯ 8 ಆನೆಗಳ ಪೈಕಿ ತರುಣ ಆನೆ ಎನಿಸಿಕೊಂಡಿರುವ ಅಶ್ವತ್ಥಾಮ ಆನೆ ನೋಡಲು ಬಲು ಆಕರ್ಷಣೆ ಹೊಂದಿದೆ. ಅಗಲವಾದ ಅಣೆಪಟ್ಟಿ, ಎತ್ತರವಾದ ಮೈಕಟ್ಟು, ವಿಶಾಲವಾದ ಬೆನ್ನು ಇದ್ದೆಲ್ಲವನ್ನು ಪರಿಗಣಿಸಿರುವ ಅರಣ್ಯ ಇಲಾಖೆ ಈ ಆನೆಯನ್ನು ಎರಡನೇ ಸಾಲಿನ ಪ್ರಮುಖ ಆನೆಯಾಗಿ ಪರಿಗಣಿಸಿದೆ. 

ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್‌. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!

ಮೊದಲ ಬಾರಿಗೆ ದಸರಾದಲ್ಲಿ(Dussehra) ಪಾಲ್ಗೊಳ್ಳುವ ಅವಕಾಶ ಪಡೆದಿರುವ ಅಶ್ವತ್ಥಾಮ ಆನೆಯನ್ನು ಹಾಸನ ಜಿಲ್ಲೆ ಸಕಲೇಶಪುರ ಸುತ್ತಮುತ್ತ 2017 ರಲ್ಲಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಕೇವಲ ನಾಲ್ಕು ವರ್ಷಗಳಲ್ಲಿ ಪುಂಡಾನೆ ಗಂಭೀರ ಆನೆಯಾಗಿ ಬದಲಾಗಿದೆ. ಈ ಕಾರಣಕ್ಕೆ ಅರಣ್ಯ ಇಲಾಖೆ(Forest department) ಅಧಿಕಾರಿಗಳು ಈ ಬಾರಿ ದಸರಾಕ್ಕೆ ಅಶ್ವತ್ಥಾಮನನ್ನು ಕರೆತಂದಿದ್ದಾರೆ. 34 ರ ಹರೆಯದ ಆಕರ್ಷಕ ಆನೆಯು 2.85 ಮೀಟರ್ ಎತ್ತರ, 3.46 ಉದ್ದದ ದೇಹ ಹಾಗೂ 3,630 ಕೆ.ಜಿ ತೂಕವಿದೆ. ಸಮತಟ್ಟಾದ ಬೆನ್ನು ನೀಳ ದಂತ ಹೊಂದಿರುವುದರಿಂದ  ಅಭಿಮನ್ಯುವಿನ ಉತ್ತರಾಧಿಕಾರಿಗಳ ಆನೆಗಳ ಪಟ್ಟಿಯಲ್ಲಿ ಈತನು ಸೇರ್ಪಡೆಗೊಂಡಿದ್ದಾನೆ. 

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?