Aug 4, 2023, 3:23 PM IST
ಹೆಚ್ಚು ಕಮ್ಮಿ ಕಳೆದ 20 ತಿಂಗಳಿಂದ ಸರ್ಕಾರ ಅಂಗನವಾಡಿಗೆ(Anganwadi)ಬಾಡಿಗೆ ಹಣ ಬಿಡುಗಡೆ ಮಾಡಿರಲಿಲ್ಲ. ಅವರೆಲ್ಲ ಆ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಮಾಂಗಲ್ಯವನ್ನ ಅಡವಿಟ್ಟಿದ್ದರು. ತಾಳಿ, ಇತರೆ ಆಭರಣ(ornaments) ಅಡವಿಟ್ಟು ಬಾಡಿಗೆ ಕಟ್ಟುತ್ತಿದ್ದರು. ಈ ಸುದ್ದಿ ಇಡೀ ರಾಜ್ಯವೇ ನಾಚಿಕೆ ಪಡೋ ಸುದ್ದಿ ಆಗಿತ್ತು. ಕುಂದಾನಗರಿ ಬೆಳಗಾವಿ(Belagavi) ಜಿಲ್ಲೆಯಲ್ಲಿ ಅದೆಷ್ಟೋ ಅಂಗನವಾಡಿಗಳು ಇದ್ದಾವೆ. ಆದ್ರೆ, ಬೆಳಗಾವಿ ನಗರದ ಕೆಲವು ಅಂಗನ ವಾಡಿಯ ಬಾಡಿಗೆ ಕಟ್ಟದೇ ಕಟ್ಟಡ ಖಾಲಿ ಮಾಡಿ ಅಂತ ಮಾಲೀಕರು ಪೀಡಿಸುತ್ತಿದ್ರು. ಹೀಗಾಗಿ ಭವಿಷ್ಯದ ಮಕ್ಕಳ ಹಿತ ದೃಷ್ಟಿಯಿಂದ ಮಾತೃ ಹೃದಯ ಮಿಡಿದು ಕೆಲವು ಕಾರ್ಯಕರ್ತೆಯರು ತಮ್ಮ ಚಿನ್ನಾಭರಣ ಅಡವಿಟ್ಟು ಬಾಡಿಗೆ ಕಟ್ಟುತ್ತಿದ್ರು.
ಆದ್ರೆ ಇವರ ನೆರವಿಗೆ ಯಾರೂ ನಿಲ್ಲಲಿಲ್ಲ. ಬಿಗ್3ಯಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಇಡೀ ಜಿಲ್ಲಾಡಳಿತ ಅಲರ್ಟ್ ಆಯ್ತು. ಖುದ್ದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಖಾಡಕ್ಕೆ ಧುಮುಕಿದ್ರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ನಾಗರಾಜ್ಗೆ ಕ್ಲಾಸ್ ತೆಗೆದುಕೊಂಡ್ರು. ತಕ್ಷಣವೇ ಅಂಗನವಾಡಿಗೆ ತೆರಳಿ ಟೀಚರ್ಸ್‌ಗಳಿಗೆ ಧೈರ್ಯ ತುಂಬಿ ಸಮಸ್ಯೆ ಕ್ಲೀಯರ್ ಮಾಡಲು ತಿಳಿಸಿದ್ರು. ಅದಾಗಲೇ ಈ ಸುದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಅವರ ಗಮನಕ್ಕೂ ಬಂದಿತ್ತು. ಶಭಾನಾ ಅವ್ರು 22 ಸಾವಿರಕ್ಕೆ ತಮ್ಮ ಮಾಂಗಲ್ಯ ಸರವನ್ನ ಅಡವಿಟ್ಟಿದ್ದರು. ಸಿಡಿಪಿಓ ಲಕ್ಷ್ಮಣ ಭಜಂತ್ರಿ ವೈಯಕ್ತಿಕ 22 ಸಾವಿರ ಹಣ ನೀಡಿದ್ದಾರೆ. ಸದ್ಯ ಶಭಾನಾ ಅವರ ಮಾಂಗಲ್ಯಸರ ಅವರ ಕೈ ಸೇರಿದೆ. ಇನ್ನೂ ಉಳಿದ ಕಾರ್ಯಕರ್ತೆಯರು ಅಡವಿಟ್ಟಿರುವ ಚಿನ್ನಾಭರಣವನ್ನು ಹಂತ ಹಂತವಾಗಿ ಬಿಡಿಸಿಕೊಡಲಾಗುತ್ತೆ.
ಇದನ್ನೂ ವೀಕ್ಷಿಸಿ: ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !