ಬಿಬಿಎಂಪಿ ಬಸ್‌ ನಿಲ್ದಾಣ ತೆರವು..ಖಾಸಗಿ ಹೋಟೆಲ್‌ ನಿರ್ಮಾಣ: ಏನ್‌ ಮಾಡ್ತಿದೆ ಬಿಬಿಎಂಪಿ..?

May 23, 2024, 9:05 AM IST

ಸಿಲಿಕಾನ್‌ ಸಿಟಿಯಲ್ಲಿ(Bengaluru) ಬಿಎಂಟಿಸಿ ಬಸ್‌ ನಿಲ್ದಾಣವೇ ಮಂಗಮಾಯವಾಗಿರುವ ಘಟನೆ ನಡೆದಿದೆ. ಬಿಎಂಟಿಸಿ(BMTC) ಬಸ್‌ ನಿಲ್ದಾಣ ಇದ್ದ ಜಾಗದಲ್ಲಿ ಇದೀಗ ಖಾಸಗಿ ಹೋಟೆಲ್‌(Private hotel) ನಿರ್ಮಾಣವಾಗಿದೆ. ಈ ವಿಷಯ ಇನ್ನೂ ಬಿಬಿಎಂಪಿ(BBMP) ಗಮನಕ್ಕೆ ಬಂದಿಲ್ವಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಿಲ್ದಾಣವಿಲ್ಲದ ಕಾರಣ ರಸ್ತೆಯಲ್ಲೇ ಸಾರ್ವಜನಿಕರು ಬಿಸಿಲಿನಲ್ಲಿ ಗಂಟೆಗಟ್ಟಲೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ಬಂದೋದಗಿದೆ. ಖಾಸಗಿ ಜಾಗದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು ಎಂದು ಹೋಟೆಲ್‌ ಮಾಲೀಕರು ಹೇಳುತ್ತಿದ್ದಾರೆ. ಸದ್ಯ ಒಂದು ವಾರದಿಂದ ಅಮರಜ್ಯೋತಿ ನಗರ ಬಸ್‌ ನಿಲ್ದಾಣ(Amarjyoti Nagar bus stand) ಮಾಯವಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಬುದ್ಧ ಪೂರ್ಣಿಮಾ ಇದ್ದು, ಈ ದಿನದ ವಿಶೇಷತೆ ಏನು ಗೊತ್ತಾ?