ಉಡುಪಿಯಲ್ಲಿ ಕ್ರಿಸ್‌ಮಸ್‌ ತಯಾರಿ ಶುರು: ವೈನ್‌, ರಮ್‌ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್‌ ಸಿದ್ಧ

ಉಡುಪಿಯಲ್ಲಿ ಕ್ರಿಸ್‌ಮಸ್‌ ತಯಾರಿ ಶುರು: ವೈನ್‌, ರಮ್‌ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್‌ ಸಿದ್ಧ

Published : Nov 28, 2023, 11:28 AM IST

ಉಡುಪಿಯಲ್ಲಿ ತಿಂಗಳ ಮೊದಲೇ ಕ್ರಿಸ್ಮಸ್ ತಯಾರಿ ಜೋರಾಗಿದೆ. ಪಾಶ್ಚಾತ್ಯರಲ್ಲೂ ನಮ್ಮಲ್ಲಿರುವಂತೆ ಕೆಲ ಅಪರೂಪದ ಸಂಪ್ರದಾಯಗಳಿವೆ. ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿರುವ ಒಂದು ಆಚರಣೆಯಂತೂ ತುಂಬಾನೇ ಇಂಟರೆಸ್ಟಿಂಗ್ ಆಗಿದೆ.
 

ರುಚಿರುಚಿಯಾದ dry Fruits. ನೂರಾರು ಬಗೆಯ ರಾಶಿ ರಾಶಿ ಡ್ರೈ ಫ್ರುಟ್ಸ್ ಗೆ ಆಲ್ಕೋಹಾಲ್  ಮಿಕ್ಸಿಂಗ್(Mixing alcohol).ಸ್ಮೆಲ್ ತಗೊಂಡ್ರೆ ಅಮಲೇರುವಂತಿದೆ.. ಇದು ಉಡುಪಿಯಲ್ಲಿ(Udupi) ತಿಂಗಳ ಮೊದಲೇ ಶುರುವಾದ ಕ್ರಿಸ್ಮಸ್(Christmas) ಹಬ್ಬದ ಕೇಕ್ ತಯಾರಿ. ಡ್ರೈ ಫ್ರುಟ್ಸ್  ಗುಡ್ಡೆ ಹಾಕಿ ರಮ್, ವಿಸ್ಕಿ, ಬ್ಲಾಕ್ ವೈನ್, ರೆಡ್ ವೈನ್, ಬಗೆಬಗೆಯ ಜ್ಯೂಸ್ ಗಳನ್ನ ಸುರಿಯುತ್ತಾರೆ. ಬಳಿಕ ಕಲಸಿಟ್ಟು ಹದ ಮಾಡಲಾದ ಮಿಶ್ರಣವನ್ನು ಮುಚ್ಚಿ ಪೆಟ್ಟಿಗೆಯೊಳಗೆ ಇರಿಸಲಾಯ್ತು. ಈ ಹುಳಿಯಾದ ಮಿಕ್ಸ್ ನ್ನು ಬಳಸಿ ರುಚಿರುಚಿಯಾದ ಕೇಕ್(Cake) ತಯಾರಿಸೋದು ಪಾಶ್ಚಾತ್ಯರ ಆಚರಣೆ.ಕ್ರಿಸ್ಮಸ್ ಹಬ್ಬಕ್ಕೆ ಚಪ್ಪರಿಸಲು ತಿಂಗಳ ಮೊದಲೇ ಕೇಕ್ ತಯಾರಿ ಮಾಡ್ತಾರೆ. ಅದೇ ರೀತಿ ಉಡುಪಿಯ ಮಣಿಪಾಲದಲ್ಲಿರುವ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಒಣ ಹಣ್ಣುಗಳನ್ನು ಹುಳಿ ಮಾಡುವ ಕಾಯಕಕ್ಕೆ ಚಾಲನೆ ನೀಡಲಾಯ್ತು.ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ತೆನೆ ಕಟಾವಿನ ಸೀಸನ್ ಕಳೆದ ನಂತ್ರ ಈ ಅಪರೂಪದ ಸಂಪ್ರದಾಯ ಪಾಲಿಸಲಾಗುತ್ತೆ. ಕ್ರಿಸ್ಮಸ್ ಹಬ್ಬಕ್ಕೆ ಬೇಕಾದ ಕೇಕ್ಗೆ ತಯಾರಿ ನಡೆಸೋದು ಈ ಆಚರಣೆಯ ಉದ್ದೇಶವಾಗಿದೆ.ಬ್ರಿಟೀಷರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ವೈನ್ ಮತ್ತು ರಮ್ ಬೆರೆಸಿದ ಈ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್ ಸಿದ್ದವಾಗುತ್ತೆ. ಇದರಿಂದ ತಯಾರಾದ ಕೇಕ್ ನಲ್ಲಿ ಏನೋ ಒಂದು ಕಿಕ್ ಇರುತ್ತದೆ. ಮಾಹೆ ವಿಶ್ವವಿದ್ಯಾಲಯದ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಈ ಮೂಲಕ ಪ್ರಾಯೋಗಿಕವಾಗಿ ಲಾರ್ಜ್ ಸ್ಕೇಲ್ ಕುಕ್ಕಿಂಗ್ ಅಭ್ಯಾಸ ಮಾಡಿದ್ರು. ಪ್ರತಿ ಹಬ್ಬಕ್ಕೂ ಅದರದ್ದೇಯಾದ ಸಂಪ್ರದಾಯವಿದೆ.  ಆಚರಿಸುವ ರೀತಿಯಲ್ಲಿ ವೈವಿಧ್ಯತೆ  ಇದೆ. ಕ್ರಿಸ್ ಮಸ್ ಮತ್ತು ಹೊಸವರ್ಷದ ಸಂದರ್ಭದಲ್ಲಿ ಹೋಟೇಲ್ ಗೆ ಬರುವ ಅತಿಥಿಗಳಿಗೆ ಮತ್ತು ಸಾರ್ವಜನಿಕರಿಗೆ ಕೇಕ್ ವಿತರಿಸಲಾಗುತ್ತದೆ. ಕರಾವಳಿ ಭಾಗದಲ್ಲಂತೂ ಜಾತಿ,ಧರ್ಮ ಬೇಧವಿಲ್ಲದೆ ಕ್ರಿಸ್ಮಸ್ ಆಚರಿಸಲಾಗುತ್ತದೆ.

ಇದನ್ನೂ ವೀಕ್ಷಿಸಿ:  ಪೂಜೆ ವೇಳೆ ಅಲುಗಾಡುತ್ತೆ 16 ಅಡಿಯ ಹುತ್ತ ..ಕಾಫಿನಾಡಲ್ಲೊಂದು ವಿಸ್ಮಯ ಉತ್ಸವ..!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more