Oct 6, 2022, 6:24 PM IST
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಲುವಾಗಿ ಸಾಲು ಸಾಲು ರಜೆ ಸಿಕ್ಕ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರ ಜಾತ್ರೆ ಏರ್ಪಟ್ಟಿದೆ. ಅದರಲ್ಲೂ ಪ್ರಮುಖವಾಗಿ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಿನಗಿರಿಯಲ್ಲಿ ಭಾರೀ ಪ್ರವಾಸಿಗರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಾಲು ಸಾಲು ರಜೆ: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಪ್ರವಾಹ..!
ಇಂದು ಒಂದೇ ದಿನ ಮುಳ್ಳಯ್ಯನಗಿರಿ ಭಾಗಕ್ಕೆ ಸುಮಾರು 3000ಕ್ಕೂ ಅಧಿಕ ವಾಹನಗಳು ಭೇಟಿ ನೀಡಿವೆ. ಅಂದಾಜು 10,000ಕ್ಕೂ ಅಧಿಕ ಪ್ರವಾಸಿಗರು ಮುಳ್ಳಯ್ಯನಗಿರಿಯಲ್ಲಿ ಜಮಾಯಿಸಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯವಾಗದೆ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಂದ ಹಣವನ್ನ ಸಂಗ್ರಹ ಕೂಡ ಮಾಡದೆ ಬಂದಂತಹ ಪ್ರವಾಸಿಗರನ್ನ ಹಾಗೆ ಬಿಟ್ಟಿದ್ದಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.