ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಶೋ ನಡೆಯುತ್ತಿದ್ದು, ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆಯನ್ನು ನೀಡಿದ್ದಾರೆ. ವೈಮಾನಿಕ ಪ್ರದರ್ಶನದಲ್ಲಿ ಲೋಹದ ಹಕ್ಕಿಗಳ ಕಲರವ ಭರ್ಜರಿಯಾಗಿ ನಡೆಯುತ್ತಿದ್ದು, ಆಗಸದಲ್ಲಿ ತೇಜಸ್ ಚಮತ್ಕಾರ ಆರಂಭವಾಗಿದೆ. ತೇಜಸ್ ಸೇರಿ ಹಲವು ಯುದ್ದ ವಿಮಾನಗಳ ಕಸರತ್ತು ಗಮನ ಸೆಳೆಯಿತು.