ಕಂಬಿ ಹಿಂದೆ ದಾಸ.. 100 ದಿನಗಳಲ್ಲಿ ಕರ್ಮ ಕಾಡಿದ್ದು ಹೇಗೆ..?ಶತದಿನದಲ್ಲಿ ಏನೆಲ್ಲಾ ಆಯ್ತು..? ಎಲ್ಲಿದ್ದ ದರ್ಶನ್ ಎಲ್ಲಿಗೆ ಬಂದ..?

Sep 18, 2024, 11:45 AM IST

ಬೆಂಗಳೂರು(ಸೆ.18): 100 ಡೇಸ್….ಕಾಟೇರನ ಕೈಗೆ ಖಾಕಿ ಕೋಳ ಹಾಕಿ ಕಳೆದೇ ಹೋಯ್ತು ನೂರು ದಿನ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಂಬಿ ಹಿಂದೆ ಹೋದ ದಾಸನ ಬಾಳಲ್ಲಿ ಈ ಶತದಿನದಲ್ಲಿ ಕರ್ಮ ಹೇಗೆಲ್ಲಾ ಕಾಡಿದೆ..? ಮೈಸೂರು to ಬಳ್ಳಾರಿ.. ಮಧ್ಯದಲ್ಲಿ ಬೆಂಗಳೂರು… ಹೇಗಿತ್ತು ಚಿಂಗಾರಿಯ ಕ್ರೈಂ ಡೈರಿ. ? ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್ 100 ಡೇಸ್.. ಡೆವಿಲ್ ಕೇಸ್…

ಈ ಮಧ್ಯೆ ದರ್ಶನ್ ಮಾಡಿಕೊಂಡ ಎಡವಟ್ಟುಗಳು ಒಂದಾ..? ಎರಡಾ..? ಅವುಗಳಿಂದಲೇ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಿದ್ದು. ಜೈಲಿನಲ್ಲಿ ದರ್ಶನ್ ಮಾಡಿಕೊಂಡ ಎಡವಟ್ಟುಗಳ ಬಗ್ಗೆ ತೋರಿಸ್ತಿವಿ. 
ದರ್ಶನ್ ಅರೆಸ್ಟ್ ಆಗಿ ನೂರು ದಿನಗಳಾಗಿವೆ.  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಆಂದರ್ ಆಗಿದ್ದೇ ಆಗಿದ್ದು..ಪರಪ್ಪನ ಅಗ್ರಹಾರದಲ್ಲಿ ಆತ ಪಾಠ ಕಲೀತಾನೆ ಅಂತಲೇ ಎಲ್ರೂ ಮಾತನಾಡಿಕೊಂಡ್ರು. ಆದ್ರೆ ಅಲ್ಲಿ ಆಗಿದ್ದೇ  ಬೇರೆ. ಪರಿಣಾಮ, ದರ್ಶನ್ ಬೆಂಗಳೂರಿನಿಂದ  ಬಳ್ಳಾರಿಗೆ ಶಿಫ್ಟ್ ಆದ. ಈಗ ಆತನಿಗೆ ನಿಜವಾದ ಜೈಲು ದರ್ಶನವಾಗ್ತಿದೆ. 

ರಾಜಸ್ಥಾನ ರಾಯಲ್ಸ್ ಜೊತೆ ಕಿಚ್ಚನ ಸಂಬಂಧ ಏನು? ಇಲ್ಲಿದೆ ನೋಡಿ ಸುದೀಪ್ ಮನೆಯ ಎಕ್ಸ್ ಕ್ಲ್ಯೂಸೀವ್ ಹೋಮ್ ಟೂರ್

ಈ ಕೇಸ್ನಲ್ಲಿ ಸೆಪ್ಟಂಬರ್ 04 ರಂದು ಚಾರ್ಜ್ ಶೀಟ್ ಕೂಡ ಸಲ್ಲಿಯಾಗಿದೆ. ದರ್ಶನ್ ಮುಂದಿನ ನಡೆ ಏನಾಗಿರಬಹುದು..? ಜೈಲಿನಿಂದ ಹೊರಬರೋಕೆ ದರ್ಶನ್ ಪ್ರಯತ್ನ ಹೇಗಿದೆ ಅನ್ನೋದನ್ನ ತೋರಿಸ್ತೀವಿ.

ಕೊಲೆ ಪ್ರಕರಣದಲ್ಲಿ ದರ್ಶನ್ನ ಅರೆಸ್ಟ್ ಮಾಡಿ 100 ದಿನಗಳಾಗಿವೆ.  ಬಳ್ಳಾರಿ ಜೈಲಿನಲ್ಲಿ ಕಂಬಿ ಹಿಂದೆ ಕೂತು ದರ್ಶನ್ ದಿನ ದೂಡ್ತಿದ್ದಾನೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ  ಕೆಲವರು ಬೇಲ್ಗೆ ಅರ್ಜಿ ಹಾಕ್ಕೊಂಡು ಸರ್ಕಸ್ ಮಾಡ್ತಿದ್ರೆ, ದರ್ಶನ್ ಮಾತ್ರ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ಹಾಗಿದ್ರೆ ಬೇಲ್ಗೆ ಅರ್ಜಿ ಸಲ್ಲಿಸೋಕೆ ದರ್ಶನ್ ಪರ ವಕೀಲರು  ಯಾಕೆ ತಡಮಾಡ್ತಾ ಇರಬಹುದು..? ಅವರ ಲೆಕ್ಕಾಚಾರ ಏನ್ ಆಗಿರಬಹುದು. 

ಒಟ್ನಲ್ಲಿ ದರ್ಶನ್ ಅರೆಸ್ಟ್ ಆಗಿ ನೂರು ದಿನಗಳಾಗಿವೆ. ಬೇಲ್ ಮೂಲಕ ದರ್ಶನ್ನ ಬಿಡಿಸಿಕೊಂಡು ಬರಲು ತಯಾರಿಗಳು ನಡೆದಿವೆ. ಆದ್ರೆ, ಬೇಲ್ ಸಿಗುತ್ತಾ..? ಇಲ್ವಾ..? ಅನ್ನೋದನ್ನ ಕಾದು ನೋಡಬೇಕು.