ಕಾಂಗ್ರೆಸ್ ಹಾಗೂ ಬಿಜೆಪಿಗೆ ಮೀಸಲಾತಿಯ ಬಗ್ಗೆ ಮಾತನಾಡಲು ಹಕ್ಕಿಲ್ಲ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ತಿಳಿಸಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳ ಹೋರಾಟ ನ್ಯಾಯ ಸಮ್ಮತವಲ್ಲ, ಪ್ರವರ್ಗ 3ಬಿಯಿಂದ 2ಎಗೆ ಸೇರಿಸಿ ಎಂಬ ಬೇಡಿಕೆ ಸ್ವಾರ್ಥದ್ದಾಗಿದೆ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ವಿಚಾರದಲ್ಲಿ ಜನಪರ ಕೆಲಸ ಮಾಡಿಲ್ಲ. ಅವರು ಮೀಸಲಾತಿ ಉದ್ದೇಶದ ದಿಕ್ಕನ್ನು ತಪ್ಪಿಸಿದ್ದಾರೆ ಎಂದು ಕಿಡಿಕಾರಿದರು. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕೊಟ್ಟಿರುವ ಕೊಡುಗೆ ಶೂನ್ಯ. ಮೀಸಲಾತಿಯನ್ನು ತೆಗೆದು ಹಾಕಲು ಅವರು ಪ್ರಯತ್ನಿಸಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಗಣಿಧಣಿ ಶಕ್ತಿ ಪ್ರದರ್ಶನ: ಜ. 11ರಂದು ಬೃಹತ್ ರಾಜಕೀಯ ಸಮಾವೇಶ