ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗಳಿಗೆ ಸರ್ಕಾರದ ಕಡಿವಾಣ: ಅನಧಿಕೃತ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಸಮರ

Jul 5, 2024, 10:25 AM IST

ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗಳು ಇಂದಿನಿಂದ ರಸ್ತೆಗಿಳಿಯುವಂತಿಲ್ಲ. ಇಂದಿನಿಂದ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ (Unauthorized bike taxis)ವಿರುದ್ದ ಸಾರಿಗೆ ಇಲಾಖೆ (Transport Department) ಸಮರ ಸಾರಿದೆ. ಅನಧಿಕೃತ  ಬೈಕ್, ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಖಾಸಗಿ ಸಾರಿಗೆ ಸಂಘಟನಗಳ ಮನವಿ ಬೆನ್ನಲ್ಲೇ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಈಗಾಗಲೇ ಎಲೆಕ್ಟ್ರಿಕ್ ಬೈಕ್‌ಗಳನ್ನ ಟ್ಯಾಕ್ಸಿಗಳಾಗಿ ಬಳಸದಂತೆ ಸೂಚನೆ ನೀಡಲಾಗಿದೆ. ಸಾರಿಗೆ ಇಲಾಖೆ ಸೂಚನೆ ಇದ್ರು ಡೋಂಟ್ ಕೇರ್ ಎಂದು ಅನಧಿಕೃತವಾಗಿ ಎಲೆಕ್ಟ್ರಿಕ್  ಬೈಕ್ ಟ್ಯಾಕ್ಸಿಗಳನ್ನು ಚಾಲಕರು ರಸ್ತೆಗಿಳಿಸುತ್ತಿದ್ದಾರೆ. ಈ ಹಿನ್ನೆಲೆ ಇಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆರ್‌ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್ ಕಾರ್ಯಚರಣೆ ನಡೆಯಲಿದೆ. ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕೈಗೊಳ್ಳಲು ಸಾರಿಗೆ ಅಧಿಕಾರಿಗಳ 11 ಟೀಂ ರಚನೆಯಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ವಾಹನ ಪರಿಶೀಲನೆ ನಡೆಯಲಿದೆ. 

ಇದನ್ನೂ ವೀಕ್ಷಿಸಿ:  ಗ್ರಾಹಕರಿಗೆ ಹಾಲಿನ ದರ ಏರಿಕೆ, ರೈತರಿಗೆ ಮಾರಟ ದರ ಇಳಿಕೆ: ಅನ್ನದಾತನಿಗೆ ಕೋಚಿಮುಲ್‌ನಿಂದ ಬಿಗ್ ಶಾಕ್!