ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 8 ಮಂದಿ ಬಲಿ

ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 8 ಮಂದಿ ಬಲಿ

Published : May 21, 2022, 11:35 AM ISTUpdated : May 21, 2022, 12:39 PM IST

*  ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ನಡೆದ ಘಟನೆ
*  ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ಅಪಘಾತ
*  ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ 

ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ(ಮೇ.21): ಆ ಗ್ರಾಮದಲ್ಲಿ ಇಂದು ಮದುವೆಯ ಖುಷಿ, ಖುಷಿಯಲ್ಲಿ ಎಲ್ಲರೂ ಮದುವೇ ಮಾಡಲೂ ತಯ್ಯಾರಿ ನಡೆಸಿದ್ರು ಇಂದು ಆಗಬೇಕಿದ್ದ ಮದುವೆಯ ಮನೆಯಲ್ಲಿ ಜವರಾಯ ಬಿಗ್ ಶಾಕ್ ಕೊಟ್ಟಿದ್ದಾನೆ. ಇಡೀ ಗ್ರಾಮಕ್ಕೆ ಗ್ರಾಮವೇ ಶೋಕದ ವಾತಾವರಣದಲ್ಲಿದೆ ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಮಂಜುನಾಥ್ ದಾಸನಕೊಪ್ಪ ಎಂಬ ಯುವಕನು ಮದುವೇ ಇಂದು ನಡೆಯಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯೇ ಆಗಿದೆ. 

ಮೇ. 21 ರಂದು ಮನೇಯ ಮುಂದೆ ಅದ್ಧೂರಿಯಾಗಿ ಮದುವೇಯಾಗಲು ಆಮಂತ್ರಣ ಪತ್ರಿಕೆಯನ್ನ ರೆಡಿ ಮಾಡಿ ಸಂಭಂದಿಕರಿಗೆ ಕೊಡಲಾಗಿತ್ತು. ಹಿರಿಯರು ಮಾತಿನಂತೆ ಮನೆಯ ಮುಂದೆ ನಡೆಯಬೇಕಿದ್ದ ಮದುವೆ ಮಳೆಯಾಗುತ್ತಿರುವ ಹಿನ್ನಲೆಯಿಂದ ಮೇ. 20 ಬೆಳಿಗ್ಗೆ ಮಠದಲ್ಲಿ ಮದುವೆ ಮಾಡೋದಾಗಿ ನಿಶ್ಚಯ ಮಾಡಿರುತ್ತಾರೆ. ಆದರೆ ಮದುವೇಯಾಗಿ ಖುಷಿಯಿಂದ ಇರಬೇಕಾದ ಮಂಜುನಾಥ ಬಾಳಲ್ಲಿ ಸದ್ಯ ಬರಿಸಿಡಿಲು ಬಡದಂತಾಗಿದೆ..ಎಸ್ ನಿನ್ನೆ ರಾತ್ರಿ 9 ಗಂಟೆಗೆ ಬೆನಕನಟ್ಟಿ ಗ್ರಾಮದಿಂದ ರೇವಣ ಸಿದ್ದೆಶ್ವರ ಮಠದಲ್ಲಿ ಎಂಗೇಜ್‌ಮೆಂಟ್‌ ಕಾರ್ಯಕ್ರಮವನ್ನ ಮುಗಿಸಿಕೊಂಡು ಮನೆಗೆ ಬರುವಾಗ ಕ್ರೂಸರ್‌ರ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ‌ ಮರಕ್ಕೆ ಡಿಕ್ಕಿಯಾಗಿ ಬಳಿಕ ಕೃಷರ್ ವಾಹನ ಪಲ್ಟಿಯಾಗಿದೆ. ಸ್ಥಳದಲ್ಲಿ 7 ಜನರು ಮೃತ ಪಟ್ಡಿದ್ದಾರೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವನ್ನಪದಪಿದ್ದಾರೆ. ಒಟ್ಟು 9 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 

ಕರ್ನಾಟಕದಲ್ಲಿ ಮಳೆಯ ಆರ್ಭಟ: ರಾಜಕಾರಣದಲ್ಲಿ ಧಿಡೀರ್ ಬೆಳವಣಿಗೆ

ಇನ್ನು 13 ಜನರು ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾರೆ. ಇನ್ನು ಚಾಲಕ ಕುಡಿದ ಮತ್ತಿನಲ್ಲಿ ವಾಹನವನ್ನ‌ ಚಲಾಯಿಸುತ್ತಿದ್ದ ಎಂದು ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನು ಸ್ಥಳಕ್ಕೆ ಬೇಟಿ ನೀಡಿದ ಎಸ್ಪಿ ಪಿ ಕೃಷ್ಣಕಾಂತ ಭೇಟಿ ನೋಡಿ ಪ್ರಕರಣವನ್ನ ದಾಖಲಿಸಿಕೊಂಡು ಘಟನೆಯ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. 

ಇನ್ನು ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆ ಯ ಎದುರು ಕಣ್ಣೀರು ಹಾಕುತ್ತಿದ್ದಾರೆ. ಒಟ್ಟು ಕ್ರೂಸರ್ ವಾಹನದಲ್ಲಿ 22 ಜನರನ್ನ ಕರೆದುಕೊಂಡು ಹೋಗಲಾಗುತ್ತಿತ್ತು ಅದರಲ್ಲಿ 9 ಜನರು ಮೃತಪಟ್ಡಿದ್ದಾರೆ. 13 ಜನರು ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೃತ ರಾದವರ ಹೆಸರುಗಳನ್ನ ನೋಡೋದಾದ್ರೆ ಅನನ್ಯ(14), ಹರೀಶ್ (13), ಶಿಲ್ಪಾ(34), ನೀಲವ್ವಾ(60), ಮಧುಶ್ರಿ(20), ಮಹೇಶ್ವರಯ್ಯ(11), ಶಂಬುಲಿಂಗಯ್ಯ(35), ಚನ್ನವ್ವ ಮಂಜುಶ್ರಿ,  ಈ 9 ಜನರು ಮೃತ ಪಟ್ಟಿದ್ದಾರೆ. 13 ಜನರು ಸಾವು ಬದುಕಿನ ಮದ್ಯ ಹೋರಾಟವನ್ನ ನಡೆಸುತ್ತಿದ್ದಾರೆ. 

ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ನಾನು ಘಟನೆ ಯಾದ ಜಾಗದಲ್ಲೇ ಇದ್ದೆ, ಅಲ್ಲಿ ನಾನು ಹೋಗಿ ನೋಡಿದ್ದೆ ಸ್ಥಳದಲ್ಲಿ ಜನ ತುಂಬಾ ಪರದಾಡುತ್ತಿದ್ದರು ನಾನು ಅಂಬುಲೈನ್ಸ್‌ಗೆ ಕರೆ ಮಾಡಿ ಹೇಳಿದ್ದೆನೆ ಬಳಿಕ ಪೋಲಿಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳುತ್ತಿದ್ದಾರೆ. 

ಒಟ್ಡಿನಲ್ಲಿ ಚಾಲಕನ ಕುಡಿತದ ಚಡಕ್ಕೆ 9 ಜನರನ್ನ ಬಲಿ ಪಡೆದುಕೊಂಡಿದ್ದಾನೆ. ಮದುವೆಯಾಗಿ ಸುಖದಿಂದ‌ ಜೀವನ ನಡೆಸಬೇಕಿದ್ದ ಮಂಜುನಾಥ ದಾಸನಕೊಪ್ಪ ಎಂಬ ಯವಕನ ಮದುವೆಯ ಸಮಾರಂಭದ ಕಾರ್ಯಕ್ರಮದಲ್ಲಿ ಸದ್ಯ 9 ಜನರು ಸಾವನ್ನಪ್ಪಿದ್ದಾರೆ. ಇನ್ನು 13 ಜನರು ಕಿಮ್ಸ್ ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟವನ್ನ ಮಾಡುತ್ತಿದ್ದಾರೆ. ಇನ್ನುಳಿದ 13 ಜನರು ಬದುಕಿ ಬರಲಿ ಎಂಬುದು ನಮ್ಮ‌ ಆಶಯ.
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more