ಬೆಂಗಳೂರಿನಲ್ಲಿ 75ನೇ ಭಾರತೀಯ ಸೇನಾ ದಿನಾಚರಣೆ ಆಚರಿಸಲಾಯಿತು. ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಯಿಂದಾಚೆ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನಲ್ಲಿ ಭಾರತೀಯ ಸೇನಾ ದಿನಾಚರಣೆ ಆಚರಿಸಲಾಯಿತು. ಶೌರ್ಯಸಂಧ್ಯಾ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೀರ ಯೋಧರಿಗೆ ನಮನ ಸಲ್ಲಿಸಿ ಕವಾಯತು ಪ್ರದರ್ಶನದ ಮೂಲಕ ಸೇನಾ ದಿನವನ್ನು ಐತಿಹಾಸಿಕ ದಿನದ ಹೆಗ್ಗುರುತಾಗಿ ಸಂಭ್ರಮಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದರು. ಕುದುರೆ ಏರಿ ಬಂದ ರೈಡಸ್‌ಗಳಿಂದ ಮುಖ್ಯ ಅಥಿತಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಅತ್ಯಾಧುನಿಕ ಲಘು ಹೆಲಿಕಾಪ್ಟರ್ WSI ಸೇನಾ ವೈಮಾನಿಕ ಹೆಲಿಕಾಫ್ಟರ್'ಗಳು, ಸೇನೆಯ ಸಾಹಸ ವಿಭಾಗದ ಮೈಕ್ರೊಲೈಟ್ ಏರ್‌ಕ್ರಾಫ್ಟ್‌ಗಳ ಆಕರ್ಷಕ ಹಾರಾಟ ಹಾಗೂ ಸಾಹಸ ಪ್ರದರ್ಶನಗಳು ಮೈ ರೋಮಾಂಚನಗೊಳಿಸಿದವು. 500ಕ್ಕೂ ಹೆಚ್ಚು ಯೋಧರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪ್ರತಿ ವರ್ಷ ದೆಹಲಿಯಲ್ಲಿ ಕಾರ್ಯಕ್ರಮ ಮಾಡಲಾಗುತ್ತಿತ್ತು.
ಹೆಲಿಕಾಪ್ಟರ್ ಹತ್ತಲೇ ಇಲ್ಲ ಸಿದ್ದೇಶ್ವರ ಶ್ರೀಗಳು: ಸರಳತೆಯ ಸಂತನ ಅಂಗಿಗಳಿಗೆ ಕಿಸೆಗಳೇ ಇರಲಿಲ್ಲ