Fake Covid Certificate: ನಕಲಿ ಕೋವಿಡ್ ರಿಪೋರ್ಟ್ ಪತ್ತೆ: ನಾಲ್ವರ ವಿರುದ್ಧ ಪ್ರಕರಣ

Jan 20, 2022, 9:49 PM IST

ಚಾಮರಾಜನಗರ (ಜ.20): ಕೇರಳ ಗಡಿಯಲ್ಲಿ ನಕಲಿ‌ ಕೋವಿಡ್ ರಿಪೋರ್ಟ್ (Fake Covid Certificate) ಪತ್ತೆಯಾಗಿದ್ದು, ಕೇರಳ ಮೂಲದ ನಾಲ್ವರ ಮೇಲೆ ಎಫ್ಐಆರ್ (FIR) ದಾಖಲಾಗಿದೆ. ನಕಲಿ ಕೋವಿಡ್ ರಿಪೋರ್ಟ್ ತೋರಿಸಿ ಪ್ರಯಾಣ ಮಾಡುತ್ತಿದ್ದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆ ಹೊಳೆ ಚೆಕ್ ಪೋಸ್ಟ್ ಬಳಿ ನಡೆದಿದೆ. ಈ ಚೆಕ್ ಪೋಸ್ಟ್‌ ಚಾಮರಾಜನಗರ ಕೇರಳದ ಗಡಿಯಲ್ಲಿದೆ. ಒಂದೇ ಎಸ್ಆರ್‌ಎಫ್‌ಐಡಿ ಬಳಸಿ ಮೂರು ನಕಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಪ್ರಿಂಟ್ ಮಾಡಿ ಪ್ರಯಾಣ ಮಾಡುತ್ತಿದ್ದ ಕೇರಳದ ಕೋಝಿಕೋಡ್ ನಿವಾಸಿಗಳಾದ ವಿಜಯ್, ಜಯಪ್ರಕಾಶ್, ಸಂತೋಷ್, ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 1860 ರ ಅಡಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Covid-19: ಟಾರ್ಗೆಟ್ ರೀಚ್ ಮಾಡೋಕೆ ಕೋವಿಡ್ ಪಾಸಿಟಿವ್ ರಿಪೋರ್ಟ್?