ಮದುವೆ ಮನೆಯಲ್ಲಿ ತಾಳಿ ಕಟ್ಟುವ ಸಂದರ್ಭ ತಂಬಾಕು ಅಗಿಯುತ್ತಿದ್ದ ವರನಿಗೆ ವಧು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ. ತಂಬಾಕು ಅಗಿಯುತ್ತಿದ್ದ ವರನನ್ನು ನೋಡಿ ವಧು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾಳೆ. ಕೊನೆಗೂ ಸಿಟ್ಟು ತಡೆಯಲಾರದೆ ಚಿಟೀರ್ ಅಂತ ಬಾರಿಸಿ ಬಿಟ್ಟಿದ್ದಾಳೆ.
ಮದುವೆ ಮನೆಯಲ್ಲಿ ತಾಳಿ ಕಟ್ಟುವ ಸಂದರ್ಭ ತಂಬಾಕು ಅಗಿಯುತ್ತಿದ್ದ ವರನಿಗೆ ವಧು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ. ಗುಡ್ಕಾ, ತಂಬಾಕು ಅಗಿಯಬಾರದು ಎಂದು ವಿಧವಿಧವಾಗಿ ಎಚ್ಚರಿಸಿದರೂ ಅದರ ಚಟ ಬಹಳಷ್ಟು ಜನರ ಆರೋಗ್ಯ ಕೆಡಿಸಿದೆ. ಇಲ್ಲೊಂದು ಕಡೆಯಲ್ಲಿ ಸುಂದರಿ ಪತ್ನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ತಾಳಿ ಕಟ್ಟೋಕೆ ರೆಡಿಯಾಗಿದ್ದಾರೆ.
ಮುಳ್ಳು ಹಂದಿಯ ಬೇಟೆಯಾಡಲು ಬಂದ ಚಿರತೆ, ಪ್ರತಿದಾಳಿಗೆ ಹೆದರಿ ಪರಾರಿ!
ಆದರೆ ಬಹಳಷ್ಟು ಹೊತ್ತಿನಿಂದ ತಂಬಾಕು ಅಗಿಯುತ್ತಿದ್ದ ವರನನ್ನು ನೋಡಿ ವಧು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾಳೆ. ಕೊನೆಗೂ ಸಿಟ್ಟು ತಡೆಯಲಾರದೆ ಚಿಟೀರ್ ಅಂತ ಬಾರಿಸಿ ಬಿಟ್ಟಿದ್ದಾಳೆ. ಮದುವೆಯಾಗೋಕೆ ಹೊರಟು ಇಲ್ಲೇ ಗುಡ್ಕಾ ಅಗಿತೀಯಾ ಅಂತ ಕ್ಲಾಸ್ ತೆಗೆದಿದ್ದಾಳೆ.