* ಉಕ್ರೇನ್‌ನಿಂದ ತನ್ನೊಡನೆ ಬೆಕ್ಕನ್ನೂ ಕರೆತಂದ ಒಡತಿ
* ವಿದ್ಯಾರ್ಥಿನಿ ಶರಣ್ಯಾ ಜೊತೆ ಬಂದ ಕ್ರಿಸ್ಟಲ್ ಬೆಕ್ಕು
* ರಷ್ಯಾ ಅಟ್ಯಾಕ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಪ್ರಾಣಿಗಳು
ಮೈಸೂರು(ಮಾ.05): ಯುದ್ಧ ಭೀತಿಯಲ್ಲೂ ಬೆಕ್ಕಿನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಹೌದು, ಉಕ್ರೇನ್‌ನಿಂದ ತನ್ನೊಡನೆ ಬೆಕ್ಕನ್ನೂ ಕರೆತಂದಿದ್ದಾಳೆ ಒಡತಿ. ಈ ಮಾರ್ಜಾಲ ಖಾರ್ಕಿವ್‌ಗೆ ಬಾಯ್ ಬಾಯ್ ಹೇಳಿ ದೆಹಲಿಗೆ ಬಂದಿದೆ. ಮೈಸೂರಿನ ಶರಣ್ಯ ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಸದ್ಯ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ಶರಣ್ಯ ಉಕ್ರೇನ್ ಬಿಟ್ಟು ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಉಕ್ರೇನ್‌ನಲ್ಲಿ ಸಾಕಿದ್ದ ಬೆಕ್ಕಿನ ಜೊತೆ ಶರಣ್ಯ ಭಾರತಕ್ಕೆ ಬಂದಿದ್ದಾರೆ. ಪ್ರತಿ ದಿನ 18 ಗಂಟೆ ನಿದ್ದೆ ಮಾಡುತ್ತಂತೆ ಈ ಬೆಕ್ಕು.