ಚಳಿಗಾಲ ಅಧಿವೇಶ, ರೈತ ದಂಗೆ, ಸಿರಿಯಾ ಅರಾಜಕತೆ: ವೀಕ್ಷಿಸಿ ಇಂದಿನ ನ್ಯೂಸ್‌ ಅವರ್ ಸ್ಪೆಷಲ್

ಚಳಿಗಾಲ ಅಧಿವೇಶ, ರೈತ ದಂಗೆ, ಸಿರಿಯಾ ಅರಾಜಕತೆ: ವೀಕ್ಷಿಸಿ ಇಂದಿನ ನ್ಯೂಸ್‌ ಅವರ್ ಸ್ಪೆಷಲ್

Published : Dec 09, 2024, 11:28 PM IST

ರಾಜ್ಯ ರಾಜಕಾರಣ, ಚಳಿಗಾಲದ ಅಧಿವೇಶನ, ಮಧ್ಯಪ್ರಾಚ್ಯದಲ್ಲಿ ಅರಾಜಕತೆ ಸೇರಿದಂತೆ ಈ ದಿನದ ಕೆಲ ಮಹತ್ವದ ಬೆಳವಣಿಗೆಗಳ ಸಂಪೂರ್ಣ ಡಿಟೇಲ್‌ ಈ ವೀಡಿಯೋದಲ್ಲಿದೆ  ವೀಕ್ಷಿಸಿ ನ್ಯೂಸ್ ಅವರ್    

ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ನಿರೀಕ್ಷೆಯಂತೆ ವಕ್ಫ್ ಹಾಗೂ ಮುಡಾ ಹಗರಣಗಳು ಭಾರಿ ಸುದ್ದಿ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ಪ್ರತಿಪಕ್ಷ ಒಡೆದ ಮನೆಯಾಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡು ಸರ್ಕಾರ ವಿಪಕ್ಷವನ್ನು ಕಟ್ಟಿ ಹಾಕಲಿದೆಯೇ ಎಂಬ ಪ್ರಶ್ನೆ ಮೂಡಿದೆ. ವಿಪಕ್ಷಗಳ ಒಳ ಜಗಳವೇ ಸಿಎಂಗೆ ಬ್ರಹ್ಮಾಸ್ತ್ರವಾಗುವ ಸೂಚನೆಗಳು ಕಂಡು ಬರುತ್ತಿವೆ. ಮತ್ತೊಂದೆಡೆ ಪ್ರಸ್ತುತ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, 10ನೇ ದಿನವಾದ ಇಂದು ಕೂಡ ಸಂಸತ್‌ನಲ್ಲಿ ಕಾಂಗ್ರೆಸ್‌, ಉದ್ಯಮಿ ಗೌತಮ್ ಅದಾನಿ ವಿರುದ್ಧ ಇರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಗದ್ದಲ ನಡೆಸಿದೆ. ಸಂಸತ್ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ಅದಾನಿಯವರ ಮುಖವಾಡ ಧರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ. ಒಬ್ಬರು ಗೌತಮ್ ಅದಾನಿ ಮುಖವಾಡ ತೊಟ್ಟರೆ ಮತ್ತೊಬ್ಬರು ಪ್ರಧಾನಿ ನರೇಂದ್ರ ಮೋದಿ ವೇಷ ತೊಟ್ಟಿದ್ದು, ಇಬ್ಬರನ್ನು ರಾಹುಲ್ ಗಾಂಧಿ ಅಣಕು ಸಂದರ್ಶನ ಮಾಡಿದ್ದಾರೆ. 

ಮತ್ತೊಂದೆಡೆ ದೆಹಲಿ ಗಡಿಯಲ್ಲಿ ಮತ್ತೆ ರೈತ ದಂಗೆ ಶುರುವಾಗಿದ್ದು, 101 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.  ಹೋರಾಟಗಾರರ ಮೇಲೆ ಪೆಪ್ಪರ್ ಸ್ಪ್ರೆ ಮಾಡಲಾಗಿದೆ.  ಮತ್ತೊಂದೆಡೆ ಮಧ್ಯಪ್ರಾಚ್ಯದ ರಾಷ್ಟದಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಬಷರ್ ಅಲ್ ಅಸಾದ್ ರಾಜೀನಾಮೆ ನೀಡಿ ದೇಶ ತೊರೆದ ನಂತರ ಸಿರಿಯಾದಲ್ಲಿ ಬಂಡುಕೋರರ ಕೈಗೆ ಅಧಿಕಾರ ಸಿಕ್ಕಿದ್ದು, ಬಾಂಗ್ಲಾದಲ್ಲಿ ಶೇಕ್ ಹಸೀನಾ ದೇಶ ತೊರೆದ ನಂತರ ಆದಂತೆ ಸಿರಿಯಾದಲ್ಲೂ ಆರಾಜಕತೆಯ ಆರ್ಭಟ ಕಂಡು ಬರುತ್ತಿದೆ ಈ ಎಲ್ಲಾ ಸ್ಟೋರಿಗಳ ಸಂಪೂರ್ಣ ಡಿಟೇಲ್ ಈ ನ್ಯೂಸ್ ಅವರ್‌ ನಲ್ಲಿದೆ ವೀಕ್ಷಿಸಿ.

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more