Aug 25, 2022, 6:50 PM IST
ವಿಜಯಪುರ (ಆ. 25): 75 ವರ್ಷದ ಬಳಿಕ ಕೊನೆಗೂ ವಿಜಯಪುರ ಜಿಲ್ಲಾಡಳಿತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಠವನ್ನ ಗುರುತಿಸಿ ಗೌರವ ಸಲ್ಲಿಸಿದೆ. ಚಡಚಣ ತಾಲೂಕಿನ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು ಸ್ವಾತಂತ್ರ್ಯಕ್ಕಾಗಿ ಬಂದೂಕು ಕಾರ್ಖಾನೆ ತೆರೆದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಅತ್ಯುಗ್ರವಾಗಿ ಹೋರಾಡಿದ್ದ ಮಠವನ್ನೆ ಮರೆತು ಬಿಟ್ಟಿತ್ತು. ಸದ್ಯ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ವೇಳೆ ವಿಜಯಪುರ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ್ ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಹೋರಾಟವನ್ನ ಗುರುತಿಸಿ ಗೌರವಿಸಿ ಗೌರವ ಸಲ್ಲಿಸಿದ್ದಾರೆ.
ಇಂಚಗೇರಿ ಮಠದಲ್ಲಿಯೇ ಜಿಲ್ಲಾ ಮಟ್ಟದ ಆಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳನ್ನ ಕೊಂಡಾಡುವ ಕೆಲಸ ಮಾಡಿದ್ದಾರೆ..ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ನಿರ್ದೇಶನದಂತೆ ಇಂಚಗೇರಿ ಮಠದಲ್ಲಿ ಅಮೃತ ಮಹೋತ್ಸವದ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಯೋಜಿಸಲಾಯಿತು.
Vijayapura: ಶಾಲಾ ಪಠ್ಯದಲ್ಲಿ ಇಂಚಗೇರಿ ಮಠದ ಇತಿಹಾಸ ಸೇರಿಸಲು ಒತ್ತಾಯ!
ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಟ ಮಾಡಿದ ಅಂದಿನ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಪ್ರಭೂಜಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಮಠದ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶ್ರೀಗಳು ತ್ರಿವರ್ಣ ಧ್ವಜದ ಮೂಲಕ ಚಾಲನೆ ನೀಡಿದರು