ಯೋಗ ಬಲ್ಲವನಿಗೆ ರೋಗವಿಲ್ಲ, ಕೊರೋನಾ ಗೆಲ್ಲಲು ಮಾಡಿ ಈ ರೀತಿ ಯೋಗಾಭ್ಯಾಸ

Jun 21, 2021, 6:12 PM IST

ಬೆಂಗಳೂರು (ಜೂ. 21): ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕ ಶಾಂತಿ- ಸಂಯಮ ಕಾಯ್ದುಕೊಳ್ಳಲು ಯೋಗ ಬಹಳ ಸಹಕಾರಿ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ಧಿ, ಭಾವನೆ, ಆತ್ಮದ ಕುರಿತು ಅಭ್ಯಾಸ ಮಾಡಲಾಗುತ್ತದೆ. ಸತತ ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಸದ್ಗುರು ಸಿಂಹಕ್ರಿಯಾ ಯೋಗದಿಂದ ಸಾಂಕ್ರಾಮಿಕ ಭೀತಿ ದೂರ, ಮಾಡೋದು ಹೇಗೆ?

ಇತ್ತೀಚಿಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಇಂದು ಅಂತರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಮೋದಿ ಕೊರೋನಾ ಸಂಕಷ್ಟದಲ್ಲಿ ಯೋಗದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಕೊರೊನಾ ಗೆಲ್ಲಲು ಯೋಗ ಯಾವ ರೀತಿ ಸಹಾಯ ಮಾಡಬಲ್ಲದು..? ಯೋಗಾಭ್ಯಾಸದಿಂದ ಕೊರೊನಾ ಗೆಲ್ಲಬಹುದಾ..? ಇವೆಲ್ಲದರ ಬಗ್ಗೆ ಆಯುರ್ವೇದ ತಜ್ಞ ಡಾ. ಸೀತಾರಾಮ ಪ್ರಸಾದ್ ವಿವರಿಸಿದ್ದಾರೆ.