ಮಹಿಳೆಯರಲ್ಲಿ ಕಾಡುವ ಹಾರ್ಮೋನ್ ಅಸಮತೋಲನ, ಮುಟ್ಟಿನ ಬದಲಾವಣೆಗೆ ಪರಿಹಾರವೇನು..?

Jul 3, 2021, 5:44 PM IST

ಬೆಂಗಳೂರು (ಜು. 03): ಕೊರೋನಾ ವೈರಸ್ ಒಂದೊಂದು ವಯೋಮಾನದವರಲ್ಲಿ ಒಂದೊಂದು ಸಂಕಷ್ಟ ತಂದೊಡ್ಡುತ್ತಿದೆ. ಮಕ್ಕಳು, ವಯಸ್ಕರು, ಮಹಿಳೆಯರಿಗೆ ಹೀಗೆ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಮಹಿಳೆಯರಲ್ಲಿ ಆತಂಕ, ಒತ್ತಡ, ಹಾರ್ಮೋನ್‌ಗಳ ಅಸಮತೋಲನ ಕಂಡು ಬರುತ್ತಿದೆ.

ಯೋಗ ಬಲ್ಲವನಿಗೆ ರೋಗವಿಲ್ಲ, ಕೊರೋನಾ ಗೆಲ್ಲಲು ಮಾಡಿ ಈ ರೀತಿ ಯೋಗಾಭ್ಯಾಸ

ಕೊರೊನಾದಿಂದ ಗುಣಮುಖರಾದವರ ದೇಹದಲ್ಲಿ ಬದಲಾವಣೆಗಳಾಗುತ್ತಿದೆ. ಮುಟ್ಟಿನ ಸಮಸ್ಯೆ ಕಾಡುತ್ತಿದೆ. ಗರ್ಭಿಣಿಯರು ನಿಯಮಿತ ಚೆಕಪ್‌ಗೆ ಒಳಗಾಗಬೇಕಾಗುತ್ತದೆ. ಮಹಿಳೆಯರ ಸಮಸ್ಯೆಗಳು, ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು..? ಎಂದು ಸ್ತ್ರಿರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಮಾಹಿತಿ ನೀಡಿದ್ದಾರೆ.