Mar 5, 2020, 6:38 PM IST
ಬೆಂಗಳೂರು(ಮಾ. 05) ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕರೋನಾ ಶಂಕೆ ಕೇಳಿ ಬಂದಿದ್ದಕ್ಕೆ ಖುದ್ದಾಗಿ ಸ್ಥಳಕ್ಕೆ ತೆರಳಿದ ಇನ್ಸ್ ಪೆಕ್ಟರ್ ಜಾಗೃತಿ ಮೂಡಿಸಿ ಮಾದರಿ ಕೆಲಸ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಇನ್ಸ್ಪೆಕ್ಟರ್ ಶಿವಸ್ವಾಮಿ, ಇಲ್ಲಿವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ರೂಮರ್ಸ್ ಹಬ್ಬಿಸಬೇಡಿ. ವೈದ್ಯಕೀಯ ಪರೀಕ್ಷೆ ವರದಿ ಬರುವವರೆಗೂ ಕಾದು ನೋಡಬೇಕು ಎಂದು ಕೇಳಿಕೊಂಡರು.