Jan 12, 2025, 12:41 PM IST
ಅದು 10 ವರ್ಷದ ಸಂಸಾರ. ಇಬ್ಬರು ಮಕ್ಕಳೂ ಆಗಿದ್ವು. ಗಂಡ ಕೂಲಿ ಮಾಡಿ ಕುಟುಂಬವನ್ನ ಸಾಕ್ತಿದ್ದ. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಆವತ್ತೊಂದು ದಿನ ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಬರ್ತೀನಿ ಅಂತ ಹೋದ ಗಂಡ ವಾಪಸ್ ಬರಲೇ ಇಲ್ಲ. ಹೆಂಡತಿ ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿದ್ಲು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಕಂಪ್ಲೆಂಟ್ ಕೂಡ ಕೊಟ್ಟಳು. ಆದ್ರೆ ಆತ ಕಾಣೆಯಾಗಿ ಮೂರನೇ ದಿನಕ್ಕೆ ಅವನ ಶವ ನಾಲೆಯಲ್ಲಿ ತೇಲುತ್ತಿತ್ತು.
ಪೊಲೀಸರು ಅವನ ಅನುಮಾಸ್ಪದ ಸಾವಿನ ತನಿಖೆ ಆರಂಬಿಸಿದ್ರು. ಆದ್ರೆ ಅವನು ಹೆಣವಾಗಿ ಸಿಕ್ಕ ವಾರದ ಬಳಿಕ ಆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಅವನನ್ನ ಕೊಂದು ನಾಲೆಗೆ ಎಸೆಯಲಾಗಿತ್ತು. ಅಷ್ಟಕ್ಕೂ ಅವನನ್ನ ಕೊಂದಿದ್ಯಾರು? ಯಾಕಾಗಿ ಕೊಂದ್ರು? ಒಬ್ಬ ಅಮಾಯಕನೊಬ್ಬನ ಬರ್ಬರ ಕೊಲೆಯ ಹಿಂದಿನ ರಹಸ್ಯ ಮತ್ತು ಪೊಲೀಸರ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್