ಶಾರೂಖ್ ಪತ್ನಿಗೆ ಧರ್ಮ ಸಂಕಟ?.. ಗೌರಿಪುತ್ರ ಆರ್ಯನ್ ಖಾನ್ ಯಾವ ಧರ್ಮ ಫಾಲೋ ಮಾಡ್ತಾರೆ?

ಶಾರೂಖ್ ಪತ್ನಿಗೆ ಧರ್ಮ ಸಂಕಟ?.. ಗೌರಿಪುತ್ರ ಆರ್ಯನ್ ಖಾನ್ ಯಾವ ಧರ್ಮ ಫಾಲೋ ಮಾಡ್ತಾರೆ?

Published : Jun 26, 2025, 01:30 PM IST

ಹೌದು ಶಾರೂಖ್ ಮುಸ್ಲಿಂ ಧರ್ಮ ಪಾಲನೆ ಮಾಡ್ತಾರೆ. ಗೌರಿ ಹಿಂದೂವಾಗೇ ಉಳಿದಿದ್ದಾರೆ. ಆದ್ರೆ ಅವರ ಮಗ ತನ್ನನ್ನ ತಾನು ಮುಸ್ಲಿಂ ಅಂತಾನೆ ಗುರುತಿಸಿಕೊಳ್ತಾರಂತೆ. ಮನೆಯಲ್ಲಿ ಎರಡೂ ಧರ್ಮಗಳ ಆಚರಣೆ ಇದ್ದಾಗಲೂ ಆರ್ಯನ್..

ಶಾರೂಖ್ ಖಾನ್ ಮತ್ತವರ ಪತ್ನಿ ಗೌರಿಯದ್ದು ಅಂತರ್ಧರ್ಮೀಯ ವಿವಾಹ. ಇಬ್ಬರೂ ಕೂಡ ಪರಸ್ಪರರ ಧರ್ಮ, ನಂಬಿಕೆ, ಆಚರಣೆಗಳನ್ನ ಗೌರವಿಸ್ತಾರೆ. ಆದ್ರೆ ಇವರ ಮಕ್ಕಳು ಯಾವ ಧರ್ಮ ಪಾಲನೆ ಮಾಡ್ತಾರೆ ಗೊತ್ತಾ..? ಈ ಬಗ್ಗೆ ಖುದ್ದು ಗೌರಿ ಖಾನ್ ಮಾತನಾಡಿದ್ದಾರೆ. ತಮ್ಮ ಮಗನ ಧಾರ್ಮಿಕ ನಂಬಿಕೆಗಳ ಬಗ್ಗೆ ಗೌರಿ ಆಡಿದ ಮಾತುಗಳು ಈಗ ವೈರಲ್ ಆಗಿವೆ.

ಬಾಲಿವುಡ್ ನಲ್ಲಿ ಅಂತರ್​ಧರ್ಮೀಯ ವಿವಾಹ ಆದ ಅನೇಕ ಜೋಡಿಗಳಿವೆ. ಅದ್ರಲ್ಲಿ ಶಾರೂಖ್ ಌಂಡ್ ಗೌರಿ ಖಾನ್ ಕೂಡ ಇದ್ದಾರೆ. ಶಾರೂಖ್ ಌಂಡ್ ಗೌರಿ ಒಂದು ರೀತಿ ಆದರ್ಶ ದಂಪತಿಗಳು. ಬರೊಬ್ಬರಿ 34 ವರ್ಷಗಳ ಸುದೀರ್ಘ ದಾಂಪತ್ಯ ಈ ಜೋಡಿಯದ್ದು.

ಶಾರೂಖ್ ಮುಸ್ಲಿಂ ಆದ್ರೆ ಗೌರಿ ಹಿಂದೂ.ಮನೆಯಲ್ಲೂ ಇಬ್ಬರೂ ಅವರವರ ಧರ್ಮ ಪಾಲನೆ ಮಾಡ್ತಾರೆ. ಒಬ್ಬರ ನಂಬಿಕೆ, ಭಾವನೆಗಳನ್ನ ಪರಸ್ಪರ ಗೌರವಿಸ್ತಾರೆ. ಶಾರೂಖ್ ಮನೆಯಲ್ಲಿ ಎರಡೂ ಧರ್ಮದ ಹಬ್ಬಗಳನ್ನ ಸೆಲೆಬ್ರೇಟ್ ಮಾಡ್ತಾರೆ.

ಮೈ ನೇಮ್ ಈಸ್ ಖಾನ್ ಸಿನಿಮಾದ ನಾಯಕ ನಾಯಕಿಯ ರೀತಿನೇ ಶಾರೂಖ್ ಮತ್ತು ಗೌರಿ ಕೂಡ ಇದ್ದಾರೆ. ಅತ್ತ ಅವರು ನಮಾಜ್ ಮಾಡಿದ್ರೆ, ಇತ್ತ ಇವರು ಪೂಜೆ ಪುನಸ್ಕಾರ ಮಾಡ್ತಾರೆ.

ಇದೆಲ್ಲಾ ಓಕೆ ಆದ್ರೆ ನಿಮ್ಮ ಮಕ್ಕಳು ಯಾವ ಧರ್ಮ ಪಾಲನೆ ಮಾಡ್ತಾರೆ ಅಂತ ಈ ದಂಪತಿಗೆ ಆಗಾಗ ಪ್ರಶ್ನೆ ಎದುರಾಗುತ್ವೆ. ಈ ಹಿಂದೆ ಗೌರಿ ಖಾನ್ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದಾಗ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ರು. ಆ ಉತ್ತರ ಈಗ ಮತ್ತೆ ವೈರಲ್ ಆಗ್ತಾ ಇದೆ.

ಹೌದು ಶಾರೂಖ್ ಮುಸ್ಲಿಂ ಧರ್ಮ ಪಾಲನೆ ಮಾಡ್ತಾರೆ. ಗೌರಿ ಹಿಂದೂವಾಗೇ ಉಳಿದಿದ್ದಾರೆ. ಆದ್ರೆ ಅವರ ಮಗ ತನ್ನನ್ನ ತಾನು ಮುಸ್ಲಿಂ ಅಂತಾನೆ ಗುರುತಿಸಿಕೊಳ್ತಾರಂತೆ. ಮನೆಯಲ್ಲಿ ಎರಡೂ ಧರ್ಮಗಳ ಆಚರಣೆ ಇದ್ದಾಗಲೂ ಆರ್ಯನ್ ಮುಸ್ಲಿಂ ಆಗಿ ಗುರುತಿಸಿಕೊಳ್ಳುವ ಆಯ್ಕೆ ಮಾಡಿದ್ದು ಅಚ್ಚರಿ ಅಂತಾರೆ ಗೌರಿ ಖಾನ್.

ಅಸಲಿಗೆ ಶಾರೂಖ್ ಗೌರಿ ಪುತ್ರ ಈ ಹಿಂದೆ ಡ್ರಗ್ ಕೇಸ್​​ನಲ್ಲಿ ಅರೆಸ್ಟ್ ಆಗಿ ಅಪ್ಪ-ಅಮ್ಮನಿಗೆ ಆತಂಕ ತಂದಿದ್ದ. ಈತ ಹಣದ ಮತ್ತಿನಲ್ಲಿ ದಾರಿ ತಪ್ಪಿದ ಸ್ಟಾರ್ ಕಿಡ್ ಅಂತ ಅನೇಕರು ಕಾಲೆಳೆದಿದ್ರು. ಆಧ್ರೆ ಈಗ ಅಪ್ಪನ ಜೊತೆ ಸಿನಿಮಾರಂಗದಲ್ಲಿ ಌಕ್ಟಿವ್ ಆಗಿರೋ ಆರ್ಯನ್ ವೆಬ್ ಸರಣಿಯೊಂದನ್ನ ನಿರ್ದೇಶನ ಮಾಡ್ತಾ ಇದ್ದಾರೆ.

ಇದೀಗ ಗೌರಿ ಮಗನ ಬಗ್ಗೆ ಆಡಿರೋ ಮಾತುಗಳು ಮತ್ತೆ ವೈರಲ್ ಆಗಿದ್ದು, ಈ ಬಗ್ಗೆ ನಾನಾ ಕಾಮೆಂಟ್ ಬರ್ತಾ ಇವೆ. ಗೌರಿ ಏನೋ ಹಿಂದೂ. ಆದ್ರೆ ಮುಸ್ಲಿಂ ಗಂಡಸನ್ನ ಮದುವೆಯಾದ ಮೇಲೆ ಅವರ ಮಕ್ಕಳು ಮುಸ್ಲಿಂ ಆಗೇ ಆಗ್ತಾರೆ. ಅದ್ರಲ್ಲಿ ಅಚ್ಚರಿ ಏನೂ ಇಲ್ಲ ಅಂತ ಜನ ಕಾಲೇಳಿತಾ ಇದ್ದಾರೆ. ಜೊತೆಗೆ ಹಿಂದೂ ದೇವತೆಗಳ ಪೂಜೆ ನಿಮ್ಮ ಮನೆಯಲ್ಲಿ ನಿಮ್ಮ ಕಾಲಕ್ಕೆ  ನಿಂತುಹೋಗುತ್ತೆ ಅಂತ ಗೌರಿಯನ್ನ ಟೀಕೆ ಮಾಡ್ತಾ ಇದ್ದಾರೆ. ಇದರ ಬಗ್ಗೆ  ಶಾರೂಖ್ , ಗೌರಿ ಏನ್ ಹೇಳ್ತಾರೋ ಕಾದುನೋಡಬೇಕು.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
06:51BBK 12: ಎಲ್ಲಿಗೋ ವೈರಿಂಗ್​, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
21:30BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
04:21ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ!
Read more