ಟಾಕ್ಸಿಕ್ ಮೂವಿಯಲ್ಲಿ ಹಲವು ಬಹುಭಾಷಾ ತಾರೆಯರ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾನಿ ಅಂಥ ಟಾಪ್ ನಟಿಮಣಿಯರಿದ್ದಾರೆ. ಇವರೆಲ್ಲರ ಜೊತೆಗೆ ಈಗ ರುಕ್ಮಿಣಿ ಕೂಡ ಈ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ ಅನ್ನೋ ನ್ಯೂಸ್ ಬಂದಿದೆ.
ಕಾಂತಾರ ಚಾಪ್ಟರ್-1ನಲ್ಲಿ ರುಕ್ಮಿಣಿ ವಸಂತ್ (Rukmini Vasanth) ನಾಯಕಿ ಅನ್ನೋ ವಿಷ್ಯ ಕೇಳಿ ರುಕ್ಕುದು ಸಖತ್ ಲಕ್ಕು ಅಂತ ಎಲ್ಲರೂ ಕೊಂಡಾಡಿದ್ರು. ಈಗ ನೋಡಿದ್ರೆ ರುಕ್ಮಿಣಿ ಟಾಕ್ಸಿಕ್ ಮೂವಿನಲ್ಲಿ ಕೂಡ ನಟಿಸ್ತಾ ಇದ್ದಾರಂತೆ. ಅಲ್ಲಿಗೆ ಸಪ್ತಸಾಗರ ಚೆಲುವೆ ಈ ಎರಡೂ ಸಿನಿಮಾ ಮೂಲಕ ಸಪ್ತಸಾಗರದಾಚೆ ಸೌಂಡ್ ಮಾಡೋಕೆ ಸಜ್ಜಾಗಿದ್ದಾರೆ.
ಟಾಕ್ಸಿಕ್ ಮೂವಿಯಲ್ಲಿ ಸಪ್ತಸಾಗರ ಚೆಲುವೆ..?
ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ನೋಡಲಿಕ್ಕೆ ಪ್ರಪಂಚವೇ ಕಾಯ್ತಾ ಇದೆ. ಕೆಜಿಎಫ್-2 ಬಳಿಕ ಮೂರು ವರ್ಷಗಳ ಕಾಲ ಟೈಂ ತೆರೆದುಕೊಂಡು ರಾಕಿಭಾಯ್ ರೆಡಿಮಾಡ್ತಿರೋ ಸಿನಿಮಾ ಇದು. ಇಂಡಿಯಾದ ಬಹುನಿರೀಕ್ಷೆಯ ಚಿತ್ರಗಳಲ್ಲಿ ಟಾಕ್ಸಿಕ್ ಟಾಪ್ನಲ್ಲಿದೆ. ಅಂಥಾ ಮೆಗಾ ಸಿನಿಮಾದಲ್ಲಿ ರುಕ್ಮಿಣಿ ವಸಂತ್ಗೆ ನಟಿಸೋ ಚಾನ್ಸ್ ಸಿಕ್ಕಿದೆಯಂತೆ.
ಟಾಕ್ಸಿಕ್ ಮೂವಿಯಲ್ಲಿ ಹಲವು ಬಹುಭಾಷಾ ತಾರೆಯರ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾನಿ ಅಂಥ ಟಾಪ್ ನಟಿಮಣಿಯರಿದ್ದಾರೆ. ಇವರೆಲ್ಲರ ಜೊತೆಗೆ ಈಗ ರುಕ್ಮಿಣಿ ಕೂಡ ಈ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ ಅನ್ನೋ ನ್ಯೂಸ್ ಬಂದಿದೆ.
ಕಾಂತಾರ-1ನಲ್ಲೂ ರುಕ್ಮಿಣಿ ವಸಂತ್ ನಾಯಕಿ..!
ಹೌದು ಇಡೀ ವಿಶ್ವವೇ ಕಾಯ್ತಾ ಇರೋ ಕನ್ನಡ ಸಿನಿಮಾ ಕಾಂತಾರ ಚಾಪ್ಟರ್ -1 ನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನ ಕಾಂತಾರ ಟೀಂ ರುಕ್ಮಿಣಿ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿತ್ತು. ಇದ್ರಲ್ಲಿ ರುಕ್ಮಿಣಿ ರಾಣಿ ಕನಕಾವತಿ ಪಾತ್ರ ಮಾಡಿದ್ದಾರೆ. ರಾಯಲ್ ಲುಕ್ನಲ್ಲಿ ಮಿಂಚಿದ್ದಾರೆ.
ಕಾಂತಾರ ಚಾಪ್ಟರ್-1 ಮತ್ತು ಟಾಕ್ಸಿಕ್ ಈ ಎರಡೂ ಕೂಡ ಜಗತ್ತೇ ಕುತೂಹಲದಿಂದ ಕಾಯ್ತಾ ಇರೋ ಸ್ಯಾಂಡಲ್‌ವುಡ್ ಸಿನಿಮಾಗಳು. ಇಂಥಾ ಎರಡೆರಡು ಟಾಪ್ ಸಿನಿಮಾಗಳಲ್ಲಿ ನಟಿಸೋ ಚಾನ್ಸ್ ಸಿಕ್ಕಿದೆ ಅಂದ್ರೆ ರುಕ್ಕುದು ಅದೆಂತಾ ಲಕ್ ಅಲ್ವಾ,, ಅಂತಿದ್ದಾರೆ ಫ್ಯಾನ್ಸ್.
ಸದ್ಯ ಕಾಲಿವುಡ್, ಟಾಲಿವುಡ್ ನಲ್ಲಿ ಬ್ಯುಸಿಯಾಗಿರೋ ರುಕ್ಮಿಣಿ ಕಾಂತಾರ-1 ಮತ್ತು ಟಾಕ್ಸಿಕ್ ಸಿನಿಮಾ ಮೂಲಕ ಮತ್ತೊಂದು ಲೆವೆಲ್ಗೆ ಹೋಗೋದ್ರಲ್ಲಿ ಡೌಟೇ ಇಲ್ಲ. ಸಪ್ತಸಾಗರದಾಚೆ ಚೆಲುವೆ ಈ ಸಿನಿಮಾಗಳ ಮೂಲಕ ಸಪ್ತಸಾಗರದಾಚೆ ಸದ್ದು ಮಾಡಿದ್ರೂ ಅಚ್ಚರಿಯಿಲ್ಲ..!