
ರುಕ್ಮಿಣಿ ವಸಂತ್ ಅದ್ಯಾವಾಗ ಕಾಂತಾರ ಚಾಪ್ಟರ್-1 ಸಿನಿಮಾಗೆ ಸೆಲೆಕ್ಟ್ ಆದರೋ ಆಕೆಯ ಅದೃಷ್ಟವೇ ಬದಲಾಗಿದೆ. ಅಸಲಿಗೆ ಕಾಂತಾರ ಟೀಂ ಈ ಸಿನಿಮಾಗೆ ರುಕ್ಕುನೇ ನಾಯಕಿ ಅನ್ನೋದನ್ನ ಗುಟ್ಟಾಗೇ ಇಟ್ಟಿತ್ತು. ಕಳೆದ ತಿಂಗಳು ರುಕ್ಮಿಣಿ ಪಾತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಸ್ಟನ್ ಆಗಿದ್ರು.
ಕಾಂತಾರ ಚಾಪ್ಟರ್-1ನಲ್ಲಿ ನಟಿಸಿದ್ದೇ ನಟಿಸಿದ್ದು ರುಕ್ಮಿಣಿ ಅದೃಷ್ಟವೇ ಬದಲಾಗಿದೆ. ರಾಣಿ ಕನಕವತಿ ಪಾತ್ರದಲ್ಲಿ ನಟಿಸಿದ ರುಕ್ಕು ಲಕ್ಕು ಖುಲಾಯಿಸಿದೆ. ಒಂದರ ಹಿಂದೊಂದರಂತೆ ರುಕ್ಮಿಣೆಗೆ ದೊಡ್ಡ ದೊಡ್ಡ ಪ್ರಾಜೆಕ್ಟ್ಗಳು ಒಲಿದು ಬಂದಿವೆ. ರುಕ್ಮಿಣಿಗೆ ಬರ್ತಾ ಇರೋ ಆಫರ್ಗಳನ್ನ ನೋಡಿದ್ರೆ ಸಾಕ್ಷಾತ್ ದೈವವೇ ಆಶಿರ್ವಾದ ಮಾಡಿದಂತೆ ಕಾಣ್ತಾ ಇದೆ.
ಯೆಸ್ ರುಕ್ಮಿಣಿ ವಸಂತ್ ಅದ್ಯಾವಾಗ ಕಾಂತಾರ ಚಾಪ್ಟರ್-1 ಸಿನಿಮಾಗೆ ಸೆಲೆಕ್ಟ್ ಆದರೋ ಆಕೆಯ ಅದೃಷ್ಟವೇ ಬದಲಾಗಿದೆ. ಅಸಲಿಗೆ ಕಾಂತಾರ ಟೀಂ ಈ ಸಿನಿಮಾಗೆ ರುಕ್ಕುನೇ ನಾಯಕಿ ಅನ್ನೋದನ್ನ ಗುಟ್ಟಾಗೇ ಇಟ್ಟಿತ್ತು. ಕಳೆದ ತಿಂಗಳು ರುಕ್ಮಿಣಿ ಪಾತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಸ್ಟನ್ ಆಗಿದ್ರು.
ಇನ್ನೂ ಸಿನಿಮಾದ ಟ್ರೈಲರ್ ಬಂದಮೇಲಂತೂ ರಾಣಿ ಕನಕವತಿ ಲುಕ್ನಲ್ಲಿ ರುಕ್ಮಿಣಿಯನ್ನ ನೋಡಿದವರು ಮೂಗಿನ ಬೆರಳಿಟ್ಟುಕೊಂಡಿದ್ರು. ಆ ರೂಪ, ಆ ಬಣ್ಣ, ಆ ನೋಟ, ಆ ಕೇಶರಾಶಿ, ಆ ಉಡುಗೆ ತೊಡುಗೆ.. ಆಹಾ ಥೇಟ್ ರಾಣಿಯಂತೆಯೇ ಕಂಗೊಳೊಸ್ತಾ ಇದ್ದಾರೆ ರುಕ್ಮಿಣಿ.
ಕಾಂತಾರ ಚಾಪ್ಟರ್-1 ಟ್ರೈಲರ್ ಬಂದ ಮೇಲೆ ರುಕ್ಮಿಣಿ ಇಂಟರ್ನ್ಯಾಷನಲ್ ಕ್ರಶ್ ಆಗ್ತಾರೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ದಾರೆ. ಈ ಸಿನಿಮಾಗಾಗಿ ಪಾತ್ರಕ್ಕಾಗಿ ರುಕ್ಕು ಸಖತ್ ಶ್ರಮ ಪಟ್ಟಿದ್ದಾರೆ. ಕುದುರೆ ಸವಾರಿ ಕಲಿತಿದ್ದಾರೆ. ಕರಾವಳಿ ಭಾಷೆ ಕಲಿತಿದ್ದಾರೆ. ವರ್ಕ್ಶಾಪ್ನಲ್ಲಿ ಭಾಗಿಯಾಗಿ ರಾಣಿಯ ದೇಹಭಾಷೆ ಅರಿತಿದ್ದಾರೆ,
ಯೆಸ್ ಕಾಂತಾರ-1 ಸೆಟ್ಗೆ ಕಾಲಿಟ್ಟಿದ್ದೇ ಇಟ್ಟಿದ್ದು ರುಕ್ಕು ಲಕ್ಕು ಖುಲಾಯಿಸಿದೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳ ಅವಕಾಶ ಈ ಚೆಲುವೆಗೆ ಒಲಿದು ಬಂದಿವೆ. ರಾಕಿಂಗ್ ಯಶ್ ನಟನೆಯ ಮೆಗಾಪ್ರಾಜೆಕ್ಟ್ ಟಾಕ್ಸಿಕ್ ನಲ್ಲಿ ರುಕ್ಮಿಣಿ ನಟಿಸೋದು ನಿಕ್ಕಿಯಾಗಿದೆ.
ಇನ್ನೂ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಮೂವಿ , ಎನ್.ಟಿ.ಆರ್ ನೀಲ್ಕಾಂಬಿನೇಷನ್ನ ರುಕ್ಕುನೇ ನಾಯಕಿ. ಹೈದ್ರಾಬಾದ್ನಲ್ಲಿ ನಡೆದ ಕಾಂತಾರ-1 ಪ್ರೀ ರಿಲೀಸ್ ಇವೆಂಟ್ ಗೆ ಎನ್.ಟಿ.ಆರ್ ಗೆಸ್ಟ್ ಆಗಿ ಬಂದಿದ್ದು, ವೇದಿಕೆ ಮೇಲೆಯೇ ಅವರಿಗೆ ರುಕ್ಕು ನಾಯಕಿಯಾಗಿ ನಟಿಸ್ತಾ ಇರೋ ಗುಟ್ಟು ಬಯಲಾಗಿದೆ.
ಕಾಂತಾರ-1 ರುಕ್ಮಿಣಿಗೆ ಪ್ಯಾನ್ ಇಂಡಿಯಾ ಫೇಮ್ ತಂದ್ರೆ, ಟಾಕ್ಸಿಕ್, ಡ್ರ್ಯಾಗನ್ ಮೂಲಕ ರುಕ್ಮಿಣಿ ಮತ್ತೊಂದು ಲೆವೆಲ್ಗೆ ಹೋಗೋದು ಪಕ್ಕಾ. ಒಟ್ಟಾರೆ ಕಾಂತಾರ ಸೆಟ್ಗೆ ಕಾಲಿಟ್ಟಿದ್ದೇ ಇಟ್ಟಿದ್ದು ರುಕ್ಮಿಣಿಗೆ ದೈವ ಆಶಿರ್ವಾದ ಮಾಡಿದಂತೆ ಕಾಣ್ತಾ ಇದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ!