
'ದಿ ರಾಜಾ ಸಾಬ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ಹಾರರ್-ಕಾಮಿಡಿ ಚಿತ್ರವಾಗಿದೆ. ಅತೀಂದ್ರಿಯ ಶಕ್ತಿಗಳ ವಿರುದ್ಧ ಪ್ರಭಾಸ್ ಹೋರಾಡಲಿದ್ದು, ಸಂಜಯ್ ದತ್ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರುತಿ ನಿರ್ದೇಶನದ ಈ ಚಿತ್ರ ಪ್ರಭಾಸ್ ವೃತ್ತಿಜೀವನದಲ್ಲಿ ಒಂದು ವಿಭಿನ್ನ ಪ್ರಯೋಗವಾಗಿದೆ.
ಇಷ್ಟು ದಿನ ನೀವೆಲ್ಲಾ ದೈವ ದೇವರುಗಳ ರೌದ್ರ ನರ್ತನವನ್ನ ತೆರೆ ಮೇಲೆ ಕಣ್ತುಂಬಿಕೊಂಡಿದ್ದೀರಾ. ಆದ್ರೆ ಇನ್ಮುಂದೆ ಹೊಸ ವರ್ಷದಿಂದ ದೆವ್ವದ ಆರ್ಭಟವನ್ನ ನೋಡೋ ಟೈಮ್ ಬಂದಿದೆ. ಅದು ಡಾರ್ಲಿಂಗ್ ಪ್ರಭಾಸ್ ಬತ್ತಳಿಕೆಯಿಂದ.. ಪ್ರಭಾಸ್ ನಟನೆಯ ದಿ ರಾಜಾ ಸಾಬ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ಹೇಗಿದೆ ನೋಡೋಣ ಬನ್ನಿ..?
ಯೆಸ್, ಇಷ್ಟು ದಿನ ಬೆಳ್ಳಿತೆರೆ ಮೇಲೆ ದೈವ ದೇವರುಗಳ ನರ್ತನ ನೀಡಿದ್ದಾಯ್ತು. ಕಾಂತಾರ ಚಾಪ್ಟರ್ ಒನ್ ಸಿನಿಮಾದಲ್ಲಿ ದೈವ ಮಹತ್ಮೆಯನ್ನ ರಿಷಬ್ ತೆರೆದಿಟ್ಟಿದ್ರು, 45 ಸಿನಿಮಾದಲ್ಲಿ ಶಿವಣ್ಣನ 11 ದೇವರ ಅವತಾರ ಥ್ರಿಲ್ ಕೊಟ್ಟಿದೆ. ಈಗ ಹೊಸ ವರ್ಷದಿಂದ ದೆವ್ವಗಳ ಸಮಯ ಶುರುವಾಗುತ್ತೆ. ಈ ಭಾರಿ ದೆವ್ವಗಳ ಆರ್ಭಟದ ಮಧ್ಯೆ ಸಿಲುಕಿರೋದು ಬಾಹುಬಲಿ ಪ್ರಭಾಸ್..
ದಿ ರಾಜಾ ಸಾಬ್.. ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ನಟನೆಯ ಮತ್ತೊಂದು ಎಕ್ಸ್ಪರಿಮೆಂಟ್ ಸಿನಿಮಾ.. ಪ್ರತಿ ಸಿನಿಮಾದಲ್ಲೂ ಪ್ರಯೋಗಕ್ಕೆ ಒಳಗಾಗೋ ಪಭಾಸ್ ಈ ಭಾರಿ ದೆವ್ವದ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದಾರೆ. ಅತೀಂಧ್ರಿಯ ಶಕ್ತಿಗಳ ಆರ್ಭಟದ ಕಥೆ ಇರೋ ದಿ ರಾಜಾ ಸಾಬ್ ಟ್ರೈಲರ್ ರಿಲೀಸ್ ಆಗಿದೆ.
ಹಾರರ್-ಕಾಮಿಡಿ ಥ್ರಿಲ್ಲರ್ ಸಿನಿಮಾ ದಿ ರಾಜಾ ಸಾಬ್ ಸಿನಿಮಾದಲ್ಲಿ ಪ್ರಭಾಸ್ ಡಬಲ್ ರೋಲ್ನಲ್ಲಿ ಮಿಂಚಿದ್ದಾರೆ. ಪ್ರಭಾಸ್ ಗೆ ಸಂಜಯ್ ದತ್ ದೆವ್ವವಾಗಿ ಕಾಡಿದ್ದಾರೆ. ನೀಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಸಿನಿಮಾದಲ್ಲಿದ್ದಾರೆ. ಈ ಸಿನಿಮಾದ ಟ್ರೈಲರ್ ನೋಡಿದ್ರೆ, ಪ್ರಭಾಸ್ ವೃತ್ತಿ ಜೀವನದಲ್ಲಿ ಇಂತಹ ಸಿನಿಮಾ ಮಾಡಿಲ್ಲ ಅನ್ನಿಸುತ್ತೆ. ಮಾರುತಿ ನಿರ್ದೇಶನದ ಈ ಸಿನಿಮಾದ ಟ್ರೈಲರ್ನಲ್ಲಿ ಅತೀಂದ್ರಿಯ ಶಕ್ತಿಗಳ ಜೊತೆ ಪ್ರಭಾಸ್ ಹೋರಾಟ ಹೇಗಿರುತ್ತೆ ಅನ್ನೋದು ಗೊತ್ತಾಗಿದೆ. ಜನವರಿ 9ಕ್ಕೆ ದಿ ರಾಜಾ ಸಾಬ್ ತೆರೆಗೆ ಬರಲಿದೆ.