ಆಗ ಜ್ಯೂನಿಯರ್ ಆರ್ಟಿಸ್ಟ್, ಈಗ ಗ್ಲೋಬಲ್ ಹೀರೋ; ರಿಷಬ್ ಶೆಟ್ಟಿ 'ಝೀರೋ ಟು ಹೀರೋ' ಕಥೆ!

ಆಗ ಜ್ಯೂನಿಯರ್ ಆರ್ಟಿಸ್ಟ್, ಈಗ ಗ್ಲೋಬಲ್ ಹೀರೋ; ರಿಷಬ್ ಶೆಟ್ಟಿ 'ಝೀರೋ ಟು ಹೀರೋ' ಕಥೆ!

Published : Oct 03, 2025, 05:29 PM IST

ಇಷ್ಟು ದೊಡ್ಡ ಸಿನಿಮಾ ನಿರ್ದೇಶನ ಮಾಡೋದು ಸುಲಭದ ಕೆಲಸ ಅಲ್ಲ. ಅನುದಿನ ಸಾವಿರಾರು ಕಲಾವಿದರು , ನೂರಾರು ತಂತ್ರಜ್ಞರು ಇರುವ ಸಿನಿಮಾ ಸೆಟ್ಟಿಗೆ​​ ಕ್ಯಾಪ್ಟನ್ ಆಫ್ ಶಿಪ್ ಅಂದ್ರೆ ಸುಮ್ಮನೇ ಮಾತಲ್ಲ. ಇಂಥಾ ಜವಾಬ್ದಾರಿ ನಿರ್ವಹಿಸಿ, ಮುಖ್ಯಪಾತ್ರದಲ್ಲಿ ನಟನೆ ಕೂಡ ಮಾಡೋದು ಅಂದ್ರೆ ಅದು ಅಕ್ಷರಶಃ ದ್ವಿಪಾತ್ರ.

ಕಾಂತಾರ ಚಾಪ್ಟರ್-1 ನೋಡಿದವರೆಲ್ಲಾ ರಿಷಬ್ ಶೆಟ್ಟಿ ಪ್ರತಿಭೆಯನ್ನ ಹಾಡಿ ಹೊಗಳ್ತಾ ಇದ್ದಾರೆ. ಇಷ್ಟು ದೊಡ್ಡ ಬಜೆಟ್ ಸಿನಿಮಾವನ್ನ ನಿರ್ದೇಶನ ಮಾಡೋದ್ರ ಜೊತೆಗೆ ಮುಖ್ಯಪಾತ್ರದಲ್ಲಿ ನಟನೆ ಕೂಡ ಮಾಡೋದು ಸುಲಭದ ಮಾತಲ್ಲ. ಹೀಗೆ ನಟ-ನಿರ್ದೇಶಕ ದ್ವಿಪಾತ್ರಗಳನ್ನ ಆವಾಹಿಸಿಕೊಂಡು ಅಮೋಘ ಪ್ರದರ್ಶನ ಕೊಟ್ಟಿರೋ ರಿಷಬ್​​ಗೆ ದೊಡ್ಡ ದೊಡ್ಡ ಫಿಲ್ಮ್​ ಮೇಕರ್ಸ್ ಕೂಡ  ಸಲಾಂ ಅಂತಿದ್ದಾರೆ.

ಯೆಸ್ ಕಾಂತಾರ ಚಾಪ್ಟರ್-1 ಸಿನಿಮಾವನ್ನ ನೋಡಿದವರು ವಾರೇವ್ಹಾ ಅಂತಿದ್ದಾರೆ. ಇಷ್ಟು ದೊಡ್ಡ ಕ್ವಾನ್ವಾಸ್ ಕಥೆ, ಅಮೋಘ ಮೇಕಿಂಗ್ ಉಳ್ಳ ಕಥೆಯನ್ನ ರಿಷಬ್ ಮೊದಲೇ ನಿಗಧಿ ಪಡಿಸಿದ್ದ ದಿನಾಂಕಕ್ಕೆ ತೆರೆಗೆ ತಂದು ದೊಡ್ಡ ದೊಡ್ಡ  ಫಿಲ್ಮ್ ಮೇಕರ್ಸ್​​ಗಳಿಗೇ ಅಚ್ಚರಿ ಕೊಟ್ಟಿದ್ದಾರೆ.

ಇಷ್ಟು ದೊಡ್ಡ ಸಿನಿಮಾ ನಿರ್ದೇಶನ ಮಾಡೋದು ಸುಲಭದ ಕೆಲಸ ಅಲ್ಲ. ಅನುದಿನ ಸಾವಿರಾರು ಕಲಾವಿದರು , ನೂರಾರು ತಂತ್ರಜ್ಞರು ಇರುವ ಸಿನಿಮಾ  ಸೆಟ್ಟಿಗೆ​​ ಕ್ಯಾಪ್ಟನ್ ಆಫ್ ಶಿಪ್ ಅಂದ್ರೆ ಸುಮ್ಮನೇ ಮಾತಲ್ಲ.

ಇಂಥಾ ಜವಾಬ್ದಾರಿ ನಿರ್ವಹಿಸಿಕೊಂಡು ಮುಖ್ಯಪಾತ್ರದಲ್ಲಿ ನಟನೆ ಕೂಡ ಮಾಡೋದು ಅಂದ್ರೆ ಅದು ಅಕ್ಷರಶಃ ದ್ವಿಪಾತ್ರ. ರಿಷಬ್ ತೆರೆ ಮೇಲೆ ಮಾಡಿರೋ ಸಾಹಸ ಏನೇನೂ ಅಲ್ಲ. ತೆರೆ ಹಿಂದೆ ಅದಕ್ಕಿಂತ ದೊಡ್ಡ ಸಾಹಸ ಮಾಡಿದ್ದಾರೆ. ಮೃಮೇಲೆ ದೈವ ಬಂದವರಂತೆ ಕೆಲಸ ಮಾಡಿದ್ದಾರೆ. ದೇಶದ ದೊಡ್ಡ ದೊಡ್ಡ ಫಿಲ್ಮ್ ಮೇಕರ್​​ಗಳೆಲ್ಲಾ ರಿಷಬ್ ನ ಕೊಂಡಾಡ್ತಾ ಇದ್ದಾರೆ.

ಯೆಸ್ ಇವತ್ತು ವಿಶ್ವವೇ ಕೊಂಡಾಡ್ತಾ ಇರೋ ರಿಷಬ್ ಶೆಟ್ಟಿ ಜಸ್ಟ್ 12 ವರ್ಷಗಳ ಹಿಂದೆ ಒಬ್ಬ ಜ್ಯೂನಿಯರ್ ಆರ್ಟಿಸ್ಟ್. 2012ರಲ್ಲಿ ಬಂದ ತುಘಲಕ್ ಸಿನಿಮಾದಲ್ಲಿ ರಿಷಬ್ ವಿಲನ್ ಪಾತ್ರ ಮಾಡಿದ್ರೆ , ಅಟ್ಟಹಾಸ , ಲೂಸಿಯಾ ಸಿನಿಮಾಗಳಲ್ಲಿ ಖಾಕಿ ತೊಟ್ಟು ಸಹನಟನ ಪಾತ್ರ ಮಾಡಿದ್ರು.

ನಟನೆ-ನಿರ್ದೇಶನ ಎರಡಲ್ಲೂ ಆಸಕ್ತಿ ಇದ್ದ ರಿಷಬ್ , ಎರಡೂ ಕಡೆಯೂ ಸೈಕಲ್ ಹೊಡೆದಿದ್ರು. ಮುಂದೆ ರಕ್ಷಿತ್ ಶೆಟ್ಟಿ ಕೊಟ್ಟ ಅವಕಾಶದಿಂದ ರಿಷಬ್ , ರಿಕ್ಕಿ ಅನ್ನೋ ಸಿನಿಮಾ ಡೈರೆಕ್ಷನ್ ಮಾಡಿದ್ರು. ಆದ್ರೆ ಅದು ಯಶಸ್ಸು ಕಾಣಲಿಲ್ಲ.

2016ರ ಕೊನೆಯಲ್ಲಿ ಬಂದ ಕಿರಿಕ್ ಪಾರ್ಟಿ ರಿಷಬ್ ಗೆ ಯಶಸ್ಸು ತಂದುಕೊಟ್ಟ ಮೊದಲ ಸಿನಿಮಾ. ಅಲ್ಲಿಂದ ರಿಷಬ್ ತಿರುಗಿ ನೋಡಲಿಲ್ಲ. ಅಲ್ಲಿಂದ  ಇಲ್ಲಿತನಕ ರಿಷಬ್ ಸಿನಿಮಾದಿಂದ ಸಿನಿಮಾಗೆ ಬೆಳೀತಾನೇ ಇದ್ದಾರೆ. ಸಿನಿಮಾದಿಂದ ಸಿನಿಮಾಗೆ ಪ್ರಯೋಗಗಳನ್ನ ಮಾಡ್ತಾ ಒಂದೊಂದೇ ಹೆಜ್ಜೆ ಬೆಳೀತಾ ಇವತ್ತು ಗ್ಲೋಬಲ್ ಸ್ಟಾರ್ ಆಗಿದ್ದಾರೆ.

2022ರಲ್ಲಿ ಬಂದ ಕಾಂತಾರ ವಿಶ್ವದಾದ್ಯಂತ ಪ್ರಶಂಸೆ ಪಡೆದ ಮೇಲೆ, ಅದರ ಪ್ರೀಕ್ವೆಲ್ ಮಾಡೋ ಸಾಹಸಕ್ಕೆ ಕೈ ಹಾಕಿದ್ರು. ನಿರಂತರ 3 ವರ್ಷಗಳ ಸಾಹಸ ಬಳಿಕ ಸಿದ್ದಗೊಂಡಿದೆ ಕಾಂತಾರ ಚಾಪ್ಟರ್-1. ಸದ್ಯ ವಿಶ್ವದಾದ್ಯಂತ ಸಿನಿಮಾಗೆ ಮೆಗಾ ಓಪನಿಂಗ್ ಸಿಕ್ಕಿದ್ದು ರಿಷಬ್ ಪ್ರತಿಭೆಯನ್ನ ಎಲ್ಲರೂ ಕೊಂಡಾಡ್ತಾ ಇದ್ದಾರೆ. ಜಸ್ಟ್ ಒಂದು ದಶಕದಲ್ಲಿ ರಿಷಬ್ ಬೆಳೆದ ಎತ್ತರ ಎಲ್ಲರನ್ನೂ ದಂಗುಬಡಿಸುವಂಥದ್ದು.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more