ರ‍್ಯಾಪ್  ಹೆಸ್ರಲ್ಲಿ  ಇದೆಂಥಾ ಹುಚ್ಚಾಟ? ಹಿಂದೂ ದೇವತೆ ತರಹ ವೇಷ  ತೊಟ್ಟು  ಅಸಭ್ಯ ಭಂಗಿಯಲ್ಲಿ ಸಾಂಗ್!

ರ‍್ಯಾಪ್ ಹೆಸ್ರಲ್ಲಿ ಇದೆಂಥಾ ಹುಚ್ಚಾಟ? ಹಿಂದೂ ದೇವತೆ ತರಹ ವೇಷ ತೊಟ್ಟು ಅಸಭ್ಯ ಭಂಗಿಯಲ್ಲಿ ಸಾಂಗ್!

Published : Jun 24, 2025, 03:34 PM IST

ಕೆನಡಾ ಮೂಲದ ರಾಪರ್ ಟಾಮಿ ಜೆನಿಸಿಸ್ 'ಟ್ರೂ ಬ್ಲೂ' ಹಾಡಿನಲ್ಲಿ ಹಿಂದೂ ದೇವತೆಯ ವೇಷ ಧರಿಸಿ ಶಿಲುಬೆ ಹಿಡಿದು ಅಸಭ್ಯ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಕೆನಡಾ ಮೂಲದ ರಾಪರ್ ಟಾಮಿ ಜೆನಿಸಿಸ್ ಟ್ರೂ ಬ್ಲೂ ಅನ್ನೋ ಹೊಸ ರಾಪ್ ಸಾಂಗ್ ರಿಲೀಸ್ ಮಾಡಿದ್ದಾಳೆ. ಆದ್ರೆ ಈ ರಾಪ್ ಹಲವರ ಕಣ್ಣು ಕೆಂಪಗಾಗಿಸಿದೆ. ಹಿಂದೂ ದೇವತೆ ತರಹ ವೇಷ  ತೊಟ್ಟು ಶಿಲುಬೆ ಹಿಡಿದು ಅಸಹ್ಯ ಅಸಭ್ಯ ಭಂಗಿಗಳಲ್ಲಿ ಕಾಣಿಸಿಕೊಂಡಿರೋ ಟಾಮಿ ಅವತಾರ ನೋಡಿ ಇದೆಂಥಾ ಹುಚ್ಚಾಟ ಅಂತ ಜನ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ.

ಯೆಸ್ ರಾಪರ್ ಟಾಮಿ ಜೆನಿಸಿಸ್ ಹೊಸ ರಾಪ್ ಸಾಂಗ್ ‘ಟ್ರೂ ಬ್ಲೂ’ ವಿವಾದದ ಕಿಡಿ ಹೊತ್ತಿಸಿದೆ.  ಇದನ್ನ ನೋಡದವರು ರಾಪ್ ಹೆಸರಲ್ಲಿ ಇದೆಂಥಾ ಹುಚ್ಚಾಟ ಅಂತ ಟಾಮಿಗೆ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಟಾಮಿಗೆ ಛೀ ಥೂ ಅಂತಾ ಉಗೀತಾ ಇದ್ದಾರೆ.

ಟಾಮಿ ಮ್ಯೂಸಿಕ್ ಮಾಡಿರೋ ಈ ರಾಪ್​ಗೆ ಪ್ಯಾರೀಸ್ ಜೊಬೆಲ್ ನಿರ್ದೇಶನ ಮಾಡಿದ್ದಾರೆ. ಖದ್ದು ಟಾಮಿ ಇದ್ರಲ್ಲಿ ವಿಭಿನ್ನ ಭಾವ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾಳೆ. ಬಿಂದಿ .. ಕಿವಿಯೋಲೆ .. ಮೂಗುತಿ .. ಚಿನ್ನಾಭರಣ ಹಾಕಿಕೊಂಡು ಹಿಂದೂ ದೇವತೆಯಂತೆ ಮೇಕಪ್ ಮಾಡಿಕೊಂಡಿರುವ ಟಾಮಿ ಮೈತುಂಬಾ ನೀಲಿ ಬಣ್ಣ ಬಳಿದುಕೊಂಡಿದ್ದಾರೆ. ಬಿಕಿನಿಯನ್ನ ಧರಿಸಿ ಕೈಯಲ್ಲಿ ಕ್ರಿಶ್ಚಿಯನ್ ಧರ್ಮದ ಶಿಲುಬೆಯನ್ನು ಹಿಡಿದು ಅಸಹ್ಯ, ಅಶ್ಲೀಲವಾದ ಭಂಗಿಗಳಲ್ಲಿ ಫೋಸ್ ನೀಡಿದ್ದಾರೆ. ಶಿಲುಬೆಯನ್ನ ನೆಕ್ಕಿದ್ದಾರೆ.

ಯೆಸ್ ಟಾಮಿ ಜೆನಿಸಿಸ್ ಗೆ ವಿವಾಗಳು ಹೊಸತೇನಲ್ಲ. ಜೆನಿಸಿಸ್ ಯಾಸ್ಮಿನ್ ಮೋಹನ್ ರಾಜ್ ಅಲಿಯಾಸ್ ಟಾಮಿ ಜೆನಿಸಿಸ್ ಮೂಲತಃ ಕೆನಡಾ ಮೂಲದ ರಾಪರ್. ಈಕೆಯ ತಂದೆ ತಮಿಳುನಾಡು ಮೂಲದವರು ತಾಯಿ ಸ್ವಿಡನ್ ಮೂಲದವರು. ಟಾಮಿ ಹುಟ್ಟಿ ಬೆಳೆದಿದ್ದೆಲ್ಲಾ ಕೆನಡಾದಲ್ಲಿ. ಹಲವಾರು ರಾಪ್ ಸಾಂಗ್​ಗಳನ್ನ ಮಾಡಿರೋ ಟಾಮಿ ಹಲವಾರು ಬಾರಿ ವಿವಾದ ಎಬ್ಬಿಸಿದ್ದಾರೆ.

ಅಭಿವ್ಯಕ್ತಿ ಸ್ವಾಂತತ್ರ್ಯ, ಧಾರ್ಮಿಕ ಸ್ವಾತಂತ್ರದ ಹೆಸರಲ್ಲಿ ಟಾಮಿ ಮಾಡೋದೆಲ್ಲಾ ಅಶ್ಲೀಲ ಭಾವ ಭಂಗಿಯ ಹಾಡುಗಳನ್ನೇ. ಬೈ ಸೆಕ್ಷುವಲ್ ಆಗಿರೋ ಟಾಮಿ ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೆ ಈ ಸಾರಿ ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದ್ದಾರೆ.

ಟಾಮಿಯ ಟ್ರೂ ಬ್ಲೂ ಸಾಂಗ್ ವಿರುದ್ದ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗ್ತಾ ಇದ್ದು ಈಕೆ ವಿರುದ್ದ  ಕ್ರಮ ಕೈಗೊಳ್ಳಬೇಕು ಅನ್ನೋ ಒತ್ತಡ ಹೆಚ್ಚಾಗ್ತಾ ಇದೆ. ಪ್ರಚಾರ ಪಡೆಯಲಿಕ್ಕೆ ಏನ್ ಬೇಕಾದ್ರೂ ಮಾಡೋದಕ್ಕೆ ಇಂಥದವರನ್ನ ನಿರ್ಲಕ್ಷ ಮಾಡೋದೇ ಒಳ್ಳೆ ಶಿಕ್ಷೆ ಅಂತಿದ್ದಾರೆ ನೆಟ್ಟಿಗರು..!

05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
Read more