ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಇತ್ತೀಚಿಗೆ ವಾರ್-2ನಲ್ಲಿ ನಟಿಸಿ ರಂಗೇರಿಸಿದ್ರು. ಅದ್ರಲ್ಲೂ ಕಿಯಾರಾ ಬಿಕಿನಿ ಸೀನ್ ಕಿಚ್ಚು ಹಚ್ಚಿತ್ತು. ಈ ಗ್ಲಾಮರ್ ಗೊಂಬೆ ಟಾಕ್ಸಿಕ್ನಲ್ಲಿ ಮೇನ್ ಹೀರೋಯಿನ್ ಎನ್ನಲಾಗ್ತಾ ಇದೆ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಟಾಕ್ಸಿಕ್ ಮೂವಿಗೆ ರುಕ್ಮಿಣೆ ವಸಂತ್ ಎಂಟ್ರಿ ಕೊಟ್ಟಿರೋ ವಿಷ್ಯ ಗೊತ್ತೇ ಇದೆ. ಅಲ್ಲಿಗೆ ಈ ಸಿನಿಮಾದಲ್ಲಿ ನಟಿಸ್ತಾ ಇರೋ 5ನೇ ನಾಯಕಿ ಇವರು. ರಾಕಿಂಗ್ ಸ್ಟಾರ್ ಟಾಕ್ಸಿಕ್ ಅಡ್ಡಾದಲ್ಲಿ ನಾನಾ ಭಾಷೆಯ ಪಂಚ ಚೆಲುವೆಯರು ಮಿಂಚ್ತಾ ಇದ್ದಾರೆ.
ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ಬಗ್ಗೆ ಪ್ಯಾನ್ ಇಂಡಿಯಾ ದೊಡ್ಡ ನಿರೀಕ್ಷೆ ಇದೆ. ಕೆಜಿಎಫ್-2 ನಂತರ ಭರ್ತಿ 4 ವರ್ಷಗಳ ಬಳಿಕ ಯಶ್ ನಟನೆಯಲ್ಲಿ ಬರ್ತಾ ಇರೋ ಸಿನಿಮಾ ಇದು. ಸಹಜವಾಗೇ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ - ಕುತೂಹಲ ಇದೆ. ಅಭಿಮಾನಿಗಳ ಈ ನಿರೀಕ್ಷೆ ತಣಿಸುವಂತೆಯೇ ಸಿನಿಮಾದಲ್ಲಿ ಮಸ್ತ್ ಮಸಾಲ ಎಲೆಮೆಂಟ್ಸ್ ಇವೆ. ಚಿತ್ರದ ಫಸ್ಟ್ ಲುಕ್ ಟೀಸರ್ ನೋಡಿದವರು ಸ್ಟನ್ ಆಗಿದ್ದಾರೆ.
ಹೌದು ಇತ್ತೀಚಿಗೆ ಸ್ಯಾಂಡಲ್ವುಡ್ ಬ್ಯೂಟಿ ರುಕ್ಮಿಣಿ ವಸಂತ್ ಟಾಕ್ಸಿಕ್ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಅಸಲಿಗೆ ರುಕ್ಕು ಈ ಸಿನಿಮಾದಲ್ಲಿ ನಟಿಸ್ತಾ ಇರೋ ಮೊದಲ ನಾಯಕಿಯಲ್ಲ. ಈಗಾಗ್ಲೇ ಸಿನಿಮಾದಲ್ಲಿ ನಾಲ್ವರು ನಾಯಕಿಯರಿದ್ದಾರೆ. ಬೇರೆ ಬೇರೆ ಇಂಡಸ್ಟ್ರಿಯ ಚೆಂದುಳ್ಳಿಯವರು ಟಾಕ್ಸಿಕ್ನಲ್ಲಿ ನಶೆ ಏರಿಸಲಿದ್ದಾರೆ.
ಈ ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟಿಸ್ತಾರೆ ಅನ್ನೋ ವಿಷ್ಯ ಗುಟ್ಟಾಗಿ ಉಳಿದಿಲ್ಲ. ಮುಂಬೈನದಲ್ಲಿ ನಯನತಾರಾ ಭಾಗದ ಶೂಟಿಂಗ್ ನಡೆದಿದೆ. ನಯನತಾರಾ ಈ ಸಿನಿಮಾಗೆ 30ಕ್ಕೂ ಹೆಚ್ಚು ದಿನಗಳ ಕಾಲ ಡೇಟ್ಸ್ ಕೊಟ್ಟು ನಟಿಸಿದ್ದಾರೆ.
ಇನ್ನೂ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಇತ್ತೀಚಿಗೆ ವಾರ್-2ನಲ್ಲಿ ನಟಿಸಿ ರಂಗೇರಿಸಿದ್ರು. ಅದ್ರಲ್ಲೂ ಕಿಯಾರಾ ಬಿಕಿನಿ ಸೀನ್ ಕಿಚ್ಚು ಹಚ್ಚಿತ್ತು. ಈ ಗ್ಲಾಮರ್ ಗೊಂಬೆ ಟಾಕ್ಸಿಕ್ನಲ್ಲಿ ಮೇನ್ ಹೀರೋಯಿನ್ ಎನ್ನಲಾಗ್ತಾ ಇದೆ.
ಇವರ ಜೊತೆಗೆ ಬಾಲಿವುಡ್ನ ಬ್ಯೂಟೀಸ್ ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಕೂಡ ಟಾಕ್ಸಿಕ್ ಬಳಗದಲ್ಲಿದ್ದಾರೆ. ಈ ಚೆಲುವೆಯರ ಭಾಗದ ಚಿತ್ರೀಕರಣ ಕೂಡ ಮುಗಿದ ಸುದ್ದಿ ಇದೆ.
ಹೌದು ನಿರ್ದೇಶಕಿ ಗೀತು ಮೋಹನ್ ದಾಸ್ ಟಾಕ್ಸಿಕ್ ಕೊನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗ್ತಾ ಇದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣಗೊಳ್ತಾ ಇದೆ. ಈಗಾಗ್ಲೇ ಮಾರ್ಚ್ 19, 2026ಕ್ಕೆ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಸೋ ಭರದಿಂದ ಸಿನಿಮಾ ಶೂಟ್ ನಡೀತಾ ಇದೆ.
ಸೋ ಟಾಕ್ಸಿಕ್ ಪ್ರೇಕ್ಷಕರ ಮುಂದೆ ಬರಲಿಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಫ್ಯಾನ್ಸ್ ಟಾಕ್ಸಿಕ್ ಕಿಕ್ ಹೇಗಿರುತ್ತೆ ಅನ್ನೋದನ್ನ ನೋಡ್ಲಿಕ್ಕೆ ಕುತೂಹಲದಿಂದ ಕಾಯ್ತಾ ಇದ್ದಾರೆ. ಆದ್ರೆ ಚಿತ್ರದಲ್ಲಿ ಐದೈದು ಹೀರೋಯಿನ್ ಇದ್ದಾರೆ ಅನ್ನೋ ಸಂಗತಿಯೇ ಸಾಕಲ್ವಾ.. ಟಾಕ್ಸಿಕ್ ಸಿಕ್ಕಾಪಟ್ಟೆ ಕಿಕ್ಕೇರಿಸುತ್ತೆ ಅನ್ನೋದು ಗೊತ್ತಾಗಲಿಕ್ಕೆ..!
ಹೆಚ್ಚಿನ ಮಾಹಿತಿಗೆ ‘ಸಿನಿಮಾ ಹಂಗಾಮ’ ನೋಡಿ…