
ಕಾಮಿಡಿ ಕಿಲಾಡಿ ಮನುವಿನ ಆಡಿಯೋ ವೈರಲ್ ಆಗಿದ್ದು ಅದ್ರಲ್ಲಿ ದರ್ಶನ್, ಧ್ರುವ , ಶಿವಣ್ಣನನ್ನ ಆತ ನಿಂದಿಸಿದ್ದು ಗೊತ್ತೇ ಇದೆ. ಸದ್ಯ ಜೈಲಿಂದ ಹೊರಬಂದಿರೋ ಆತ ಈ ನಟರ ಕಾಲು ಹಿಡಿದು ಕ್ಷಮೆ ಕೇಳುವ ಪ್ರಯತ್ನ ಮಾಡ್ತಾ ಇದ್ದಾನೆ. ದರ್ಶನ್ - ಶಿವಣ್ಣ, ಮನು ಕೈಗೆ ಸಿಕ್ಕಿಲ್ಲ. ಧ್ರುವ ಸರ್ಜಾಗೆ
ದರ್ಶನ್ ಮತ್ತು ಧ್ರುವ ಸರ್ಜಾ ನಡುವಿನ ಸಂಬಂಧ ಸರಿಯಿಲ್ಲ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಖುದ್ದು ಧ್ರುವ , ದರ್ಶನ್ ಬಗ್ಗೆ ತಮಗೆ ಅಸಮಾಧಾನ ಇದೆ ಅಂತ ಓಪನ್ ಆಗೇ ಹೇಳಿಕೊಂಡಿದ್ರು. ಆದ್ರೆ ಈಗ ಧ್ರುವ ಒಂದು ಗೂಗ್ಲಿ ಎಸೆದಿದ್ದಾರೆ. ದರ್ಶನ್ ದೊಡ್ಡವರು.. ನಾವೆಲ್ಲಾ ಚಿಕ್ಕವರು ಅಂದಿದ್ದಾರೆ.. ಅಷ್ಟಕ್ಕೂ ಏನಿದು ಧ್ರುವ ಗೂಗ್ಲಿ ರಹಸ್ಯ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಹೌದು, ಕೆಡಿ ಧ್ರುವ ಒಂದು ಗೂಗ್ಲಿ ಹಾಕಿದ್ದಾರೆ. ಅದನ್ನ ನೋಡಿ ಧ್ರುವ ಕಂಡ್ರೆ ಕಿಡಿ ಕಿಡಿಯಾಗ್ತಾ ಇದ್ದ ದಾಸನ ಫ್ಯಾನ್ಸು ಕೊಂಚ ಖುಷಿಯಾಗಿದ್ದಾರೆ. ಧ್ರುವ ಮೇಲಿನ ಡಿ ಫ್ಯಾನ್ಸ್ ಸಿಟ್ಟು ಕೊಂಚ ಕಮ್ಮಿಯಾಗಿದೆ. ಅಷ್ಟಕ್ಕೂ ಧ್ರುವ ಎಸೆದ ಗೂಗ್ಲಿ ಎಂಥದ್ದು ಗೊತ್ತಾ..? ದರ್ಶನ್ ದೊಡ್ಡವರು ನಾವು ಚಿಕ್ಕವರು ಅಂದಿದ್ದಾರೆ.
ಅಷ್ಟಕ್ಕೂ ಧ್ರುವ ಈ ಮಾತು ಹೇಳಿರೋದು ಮಡೆನೂರು ಮನುಗೆ. ಅಸಲಿಗೆ ಕಾಮಿಡಿ ಕಿಲಾಡಿ ಮನುವಿನ ಆಡಿಯೋ ವೈರಲ್ ಆಗಿದ್ದು ಅದ್ರಲ್ಲಿ ದರ್ಶನ್, ಧ್ರುವ , ಶಿವಣ್ಣನನ್ನ ಆತ ನಿಂದಿಸಿದ್ದು ಗೊತ್ತೇ ಇದೆ. ಸದ್ಯ ಜೈಲಿಂದ ಹೊರಬಂದಿರೋ ಆತ ಈ ನಟರ ಕಾಲು ಹಿಡಿದು ಕ್ಷಮೆ ಕೇಳುವ ಪ್ರಯತ್ನ ಮಾಡ್ತಾ ಇದ್ದಾನೆ. ದರ್ಶನ್ - ಶಿವಣ್ಣ, ಮನು ಕೈಗೆ ಸಿಕ್ಕಿಲ್ಲ. ಧ್ರುವ ಸರ್ಜಾಗೆ ವಾಯ್ಸ್ ಮೆಸೇಜ್ ಕಳಿಸಿರುವ ಮನು ಅಣ್ಣಾ ಕ್ಷಮಿಸಿಬಿಡಿ ಅಂದಿದ್ದಾನೆ.
ದಯವಿಟ್ಟು ತಲೆಕೆಡಿಸಿಕೊಳ್ಳಬೇಡ. ನಿನ್ನ ತಾಯಿ, ಹೆಂಡತಿ ಮತ್ತು ಮಗು ಬಗ್ಗೆ ಗಮನ ಹರಿಸು. ಅವರನ್ನ ಚೆನ್ನಾಗಿ ನೋಡಿಕೋ. ಶಿವಣ್ಣ ಸರ್ ಮತ್ತು ದರ್ಶನ್ ಸರ್ಗೆ ಮಾತನಾಡು. ಅವರು ನಮ್ಮ ಹಿರಿಯರು. ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡ.
ಹೌದು ನನ್ನ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ. ಶಿವಣ್ಣ ಮತ್ತು ದರ್ಶನ್ ಕ್ಷಮೆ ಕೇಳು. ಯಾಕಂದ್ರೆ ಅವರು ನಮ್ಮ ಹಿರಿಯರು ಅಂತ ಧ್ರುವ ಹೇಳಿದ್ದಾರೆ. ಅಸಲಿಗೆ ಶಿವಣ್ಣನ ಬಗ್ಗೆ ಧ್ರುವಗೆ ಅದೆಷ್ಟು ಭಕ್ತಿ ಭಾವ ಇದೆ ಅನ್ನೋದು ಗೊತ್ತೇ ಇದೆ. ಆದ್ರೆ ದರ್ಶನ್ ಬಗ್ಗೆ ಈ ಮಾತು ಹೇಳಿದ್ದು ಸಹಜವಾಗೇ ದರ್ಶನ್ ಫ್ಯಾನ್ಸ್ ಅಚ್ಚರಿ ಪಡುವಂತೆ ಮಾಡಿದೆ.
ದರ್ಶನ್ ಖಂಡಿತ ಧ್ರುವಗಿಂತ ಸೀನಿಯರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಧ್ರುವ ಇನ್ನೂ ನಾಲ್ಕು ಸಿನಿಮಾ ಮಾಡಿದವರು. ದರ್ಶನ್ ಚಿತ್ರರಂಗದಲ್ಲಿ ಮೂರು ದಶಕ ಕಳೆದಿದ್ದಾರೆ. ಅಂತೆಯೇ ಈ ಹಿಂದೆ ಧ್ರುವನ ಅವರ ಫ್ಯಾನ್ಸ್ ಡಿ ಬಾಸ್ ಅಂತ ಕರೆದಾಗ , ನಮ್ಮ ಇಂಡಿಸ್ಟ್ರಿಯಲ್ಲಿ ಒಬ್ಬರೇ ಡಿ ಬಾಸ್ ಅದು ದರ್ಶನ್ ಅಂತ ಖುದ್ದು ಧ್ರುವ ಹೇಳಿದ್ರು.
ಅಸಲಿಗೆ ಧ್ರುವ ಮೊದಲು ದರ್ಶನ್ಗೆ ಅತ್ಯಾಪ್ತ ಆಗಿದ್ರು. ಅದ್ರಲ್ಲೂ ಧ್ರುವ ಸೋದರ ಚಿರು ಅಂತೂ ದರ್ಶನ್ ಬಳಗದಲ್ಲಿ ತುಂಬಾ ಹತ್ತಿರದಲ್ಲಿದ್ರು. ಅರ್ಜುನ್ ಸರ್ಜಾಗೂ ದರ್ಶನ್ ಜೊತೆಗೆ ಒಳ್ಳೆ ನಂಟಿತ್ತು. ಅರ್ಜುನ್ ನಿರ್ದೇಶನದ ಪ್ರೇಮ ಬರಹ ಸಿನಿಮಾದ ಹಾಡೊಂದರಲ್ಲಿ ಧ್ರುವ, ಚಿರು, ದರ್ಶನ್ ಎಲ್ಲಾ ಒಟ್ಟಾಗಿ ಕಾಣಿಸಿಕೊಂಡಿದ್ರು.
ಆದ್ರೆ ಮುಂದೆ ಇದೇ ಸಿನಿಮಾದ ಡಿಸ್ಟ್ರಿಬ್ಯೂಷನ್ ವ್ಯವಹಾರದಲ್ಲಿ ಅರ್ಜುನ್ ಸರ್ಜಾಗೂ ದರ್ಶನ್ಗೂ ಕೆಲ ಸಮಸ್ಯೆ ಆದ್ವು. ಮುಂದೆ ಧ್ರುವಗೆ ಬೇರೆ ಬೇರೆ ವಿಚಾರಗಳಲ್ಲಿ ದರ್ಶನ್ ಮೇಲೆ ಮುನಿಸು ಮೂಡಿತು. ಕಳೆದ ವರ್ಷ ಫಿಲ್ಮ್ ಚೇಂಬರ್ ಬಳಿ ಕಾವೇರಿ ಪ್ರತಿಭಟನೆ ನಡೆದ ವೇಳೆ ದರ್ಶನ್-ಧ್ರುವ ಎದುರಾ ಬದುರಾ ಆದ್ರೂ ಮಾತನಾಡಿರಲಿಲ್ಲ. ಈ ಬಗ್ಗೆ ಕೇಳಿದಾಗ ನನಗೆ ದರ್ಶನ್ ಮೇಲೆ ಕೆಲ ಅಸಮಾಧಾನ ಇದೆ. ಅದು ಬಗೆಹರಿದ ಮೇಲೆಯೇ ಮಾತು ಅಂತ ಧ್ರುವ ಖಡಕ್ ಆಗಿ ಹೇಳಿದ್ರು.
ಇದಾದ ಮೇಲೆ ಧ್ರುವ ಮೇಲೆ ದರ್ಶನ್ ಫ್ಯಾನ್ಸ್ ಮುನಿಸಿಕೊಂಡರು. ದರ್ಶನ್ ಜೈಲಿಗೆ ಹೋದಾಗ ಧ್ರುವ ಪ್ರತಿಕ್ರಿಯಿಸಿದ ರೀತಿ ದರ್ಶನ್ ಫ್ಯಾನ್ಸ್ಗೆ ಮತ್ತಷ್ಟು ಸಿಟ್ಟು ತರಿಸಿತ್ತು. ಈಗಲೂ ದರ್ಶನ್ ಌಂಡ್ ಧ್ರುವ ಫ್ಯಾನ್ಸ್ ದೂರ ದೂರ.
ಇಂಥಾ ಟೈಂನಲ್ಲಿ ಧ್ರುವ , ದರ್ಶನ್ ನಮ್ ಸೀನಿಯರ್ ಅಂತ ಹೇಳ್ತಾ ಒಂದು ಗೂಗ್ಲಿ ಎಸೆದಿದ್ದಾರೆ. ಅಲ್ಲಿಗೆ ಸಂಧಾನ ಆಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ..! ಕೆಡಿ ರಿಲೀಸ್ ಹೊತ್ತಲ್ಲಿ ಡೆವಿಲ್ ಫ್ಯಾನ್ಸ್ಗೆ ದ್ವೇಷ ಬಿಟ್ಟುಬಿಡಿ ಅಂತ ಸಂದೇಶ ರವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..