May 25, 2023, 1:56 PM IST
ಕಾಂತಾರ ಸಿನಿಮಾ ಯಾರ ಮನಸ್ಸು ಗೆದ್ದಿಲ್ಲ ಹೇಳಿ. ಈ ಸಿನಿಮಾ ಕಥೆ ಮಾತ್ರ ಅಲ್ಲ ಪ್ರತಿ ಹಾಡು ಕೂಡ ಸಂಗೀತ ಪ್ರಿಯರಿಗೆ ಮೋಡಿ ಮಾಡಿತ್ತು. ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಗೂ ಸಿಕ್ಕಿದೆ ಕಾಂತಾರ ಹಾಡಿನ ಟೇಸ್ಟು. ಹೌದು, ಪ್ರಧಾನಿ ಮೋದಿ ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಹೀಗಾಗಿ ಸಿಡ್ನಿಯಲ್ಲಿ ಭಾರತೀಯ ನಿವಾಸಿಗಳ ಜೊತೆ ಮೋದಿ ಬಹಿರಂಗ ಸಭೆ ನಡೆಸಿದ್ದಾರೆ. ಈ ಸಮಾರಂಭಕ್ಕೆ ಅಲ್ಲಿನ ಭಾರತೀಯರು ಮೋದಿಗೆ ಅದ್ಧೂರಿ ಸ್ವಾಗತ ಕೊಟ್ಟಿದ್ದಾರೆ. ಅದು ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ಮೂಲಕ. ಉಡುಪಿ ಕುಂದಾಪುರ ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ಕಾಂತಾರದ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.