Naveen Kodase | Updated: Apr 5, 2025, 11:03 AM IST
ಬೆಂಗಳೂರು: ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಜನಪ್ರಿಯರಾಗಿರುವ ನವರಸನ್ ಇದೇ ಮೊದಲ ಬಾರಿಗೆ ನೂರಕ್ಕೂ ಹೆಚ್ಚು ಕನ್ನಡದ ನಟಿಯರನ್ನ ಸೇರಿಸಿ "ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್" ಆಯೋಜಿಸಿದ್ದಾರೆ.
ಈ ಲೀಗ್ ನ ಉದ್ಘಾಟನೆ ಏಪ್ರಿಲ್ 5ರಂದು ನಡೆಯಲಿದೆ. ಏಪ್ರಿಲ್ 5, 6 ಶನಿವಾರ, ಭಾನುವಾರ ಕನ್ನಡ ನಟಿಯರ ಕಬಡ್ಡಿ ಟೂರ್ನಿ ನಡೆಯಲಿದೆ. "CWKL" ಜರ್ಸಿ ಹಾಗೂ ಟ್ರೋಫಿ ಬಿಡುಗಡೆ ಕಾರ್ಯಕ್ರಮ ನಡೆದಿದೆ. ನಟಿ ರಾಗಿಣಿ ಧ್ವಿವೇದಿ ಜರ್ಸಿ ಹಾಗು ಟ್ರೋಫಿ ಲಾಂಚ್ ಮಾಡಿದ್ರು.