Apr 27, 2023, 3:23 PM IST
ನಟಿ ಸಮಂತಾ 10ನೇ ತರಗತಿ ಮಾರ್ಕ್ಸ್‌ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸಮಂತಾ ಮಾರ್ಕ್ಸ್‌ಕಾರ್ಡ್ ನೋಡಿದ ಫ್ಯಾನ್ಸ್ ಅದ್ಭುತ ನಟಿ ಮಾತ್ರವಲ್ಲ ಪ್ರತಿಭಾವಂತ ವಿದ್ಯಾರ್ಥಿ ಕೂಡ ಎಂದು ಹೇಳುತ್ತಿದ್ದಾರೆ. ಸಮಂತಾ ಎಲ್ಲಾ ಸಬ್ಜೆಕ್ಟ್‌ನಲ್ಲೂ 80 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಗಣಿತದಲ್ಲಿ 100 ಮತ್ತು ಭೂಗೋಳಶಾಸ್ತ್ರ ಹಾಗೂ ಸಸ್ಯಶಾಸ್ತ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲಿ 90 ಅಂಕಗಳಿಸಿದ್ದಾರೆ. ನಟಿ ಫ್ರೌಡ ಶಿಕ್ಷಣವನ್ನು ಚೆನ್ನೈನಲ್ಲಿ ಪಡೆದಿದ್ದಾರೆ. ಅವರು 2001-2002ರ ವೇಳೆಗೆ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಡೆದ ಪರೀಕ್ಷೆಯಲ್ಲಿ ಸಮಂತಾ ಅವರು ಉತ್ತಮ ಅಂಕ ಪಡೆದಿದ್ದಾರೆ.
ಇದನ್ನೂ ವೀಕ್ಷಿಸಿ: ಉಪಾಸನಾ ಸೀಮಂತ ಕಾರ್ಯಕ್ರಮ: ಮುನಿಸು ಮರೆತು ಒಂದಾದ್ರ ಅಲ್ಲು ಅರ್ಜುನ್, ರಾಮ್‌ಚರಣ್ !