
ರಶ್ಮಿಕಾ ನಟನೆಯ 'ಥಮ್ಮಾ' ಸಿನಿಮಾ ಶತಕೋಟಿ ಕ್ಲಬ್ ಸೇರಿದ್ದು, ನಟ ವಿರಾಟ್ 'ಹರ್ಕ್ಯುಲಸ್' ಚಿತ್ರದ ಮೂಲಕ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ, ಪ್ರೊ. ರವಿ ಕೋರಿಶೆಟ್ಟರ್ ಅವರಿಗೆ 'ಐದನಿ ಚಿನ್ನದ ಪದಕ' ಗೌರವ, 'Congratulations ಬ್ರದರ್' ಚಿತ್ರದ ಬಿಡುಗಡೆ ಮಾಹಿತಿ
ಕಳೆದ ಮಂಗಳವಾರ ತೆರೆಗೆ ಬಂದ ರಶ್ಮಿಕಾ ನಟನೆಯ ಥಮ್ಮಾ ಸಿನಿಮಾ 6 ನೇ ದಿನದ ಅಂತ್ಯಕ್ಕೆ ಶತಕೋಟಿ ಕ್ಲಬ್ ಸೇರಿದೆ. ಹಾರರ್ ಕಾಮಿಡಿ ಚಿತ್ರವಾಗಿರೋ ಥಮ್ಮಾಗೆ ಮಸ್ತ್ ರೆಸ್ಪಾನ್ಸ್ ಬಂದಿದ್ದು ವೀಕೆಂಡ್ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಆಯುಷ್ಮಾನ್ ಖುರಾನಾ, ನವಾಜುದ್ದಿನ್ ಸಿದ್ದಿಕಿ, ಪರೇಶ್ ರಾವಲ್ ನಟನೆಯ ಈ ಸಿನಿಮಾದಲ್ಲಿ ರಶ್ಮಿಕಾ ಹಾಟ್ ಬೇತಾಳವಾಗಿ ಮಿಂಚಿದ್ದಾರೆ. ಸಿನಿಮಾ 100 ಕೋಟಿ ಗಳಿಸಿ ಮುನ್ನುಗ್ತಾ ಇದ್ದು ಕಿರಿಕ್ ಬ್ಯೂಟಿ ಅಕೌಂಟ್ಗೆ ಮತ್ತೊಂದು ಶತಕೋಟಿ ಸಿನಿಮಾ ಸೇರ್ಪಡೆ ಆಗಿದೆ.